ಕಾರ್ಕಳ : ಟೇರೆಸಿಯಲ್ಲಿ ಮಲಗಿದ್ದ ಮುಖ್ಯ ಶಿಕ್ಷಕರೋರ್ವರು ಕೆಳಗೆ ಬಿದ್ದು ಮೃತ್ಯಪಟ್ಟ ಘಟನೆ ಮರ್ಣೆ ಗ್ರಾಮ ಬೊಂಡುಕುಮೇರಿಯಲ್ಲಿ ಸಂಭವಿಸಿದೆ. ಸುಂದರ್ ನಾಯ್ಕ್ ಮೃತ ಶಿಕ್ಷಕ. ಇವರು ಎಣ್ಣೆಹೊಳೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಮೇ 1 ರಂದು ರಾತ್ರಿ ಸುಮಾರು 10.30 ವೇಳೆಗೆ ಟೇರೆಸಿಯಲ್ಲಿ ಮಲಗಿದ್ದರು. ಬೆಳಗ್ಗೆ 6.30ರ ವೇಳೆಗೆ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ನಿದ್ರೆಯ ಮಂಪರಿನಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎನ್ನಲಾಗುತ್ತಿದೆ. ಮೃತರು ಪತ್ನಿ ಮತ್ತು ಅವಳಿ ಪುತ್ರಿಯರನ್ನು ಅಗಲಿದ್ದಾರೆ.
ಟೇರೆಸಿಯಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಮೃತ್ಯು





















