ಮುನಿಯಾಲು : ಮನೆಯೊಳಗೆ ಬಂದ ಕಾಳಿಂಗ ಸರ್ಪ

ಹೆಬ್ರಿ : ಮುನಿಯಾಲಿನಲ್ಲಿ ಮನೆಯೊಳಗೆ ಬಂದಿದ್ದ ಬೃಹತ್‌ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ. ಬಿಸಿಲ ಬೇಗೆಯಿಂದ ರಕ್ಷಣೆ ಪಡೆಯಲು ಕಾಳಿಂಗ ಸರ್ಪ ಮನೆಯ ಒಳಗಡೆ ತಣ್ಣಗಿನ ಜಾಗದಲ್ಲಿ ಆಶ್ರಯ ಪಡೆದಿತ್ತು. ಬಳಿಕ ಉರಗ ಹಿಡಿಯುವವರು ಬಂದು ಆ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಅದೃಷ್ಟವಶಾತ್‌ ಮನೆಯವರಿಗೆ ಕಾಳಿಂಗ ತೊಂದರೆ ನೀಡಿಲ್ಲ. ವಾತಾವರಣದಲ್ಲಿ ಉಷ್ಣತೆ ಏರಿರುವುದರಿಂದ ಹಾವುಗಳು ಕೂಡ ತಂಪು ಜಾಗ ಅರಸಿಕೊಂಡು ಹೋಗುತ್ತಿವೆ. ಅಲ್ಲದೆ ಈಗ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿಯ ಸಮಯವಾಗಿದ್ದು, ಸಂಗಾತಿಯನ್ನು ಅರಸಿಕೊಂಡು ಹೋಗುತ್ತಿವೆ. ಕಾಡಿನಲ್ಲಿರುವ ಕಾಳಿಂಗಗಳು ಈ ಸಮಯದಲ್ಲಿ ನಾಡಿಗಿಳೀಯುವುದು ಸಾಮಾನ್ಯ. ಹೀಗಾಗಿ ಜನ ಎಚ್ಚರಿಕೆಯಿಂದಿರಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.
ಹಾವುಗಳು ಕತ್ತಲು, ನೆರಳು ಬೀಳುವ, ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಎಚ್ಚರಿಕೆ ವಹಿಸಿ, ಪಾದರಕ್ಷೆ, ಬೂಟ್ಸ್‌ಗಳನ್ನು ಧರಿಸುವಾಗಲೂ ಮುನ್ನೆಚ್ಚರಿಕೆ ಗಮನಿಸುವುದು ಒಳ್ಳೆಯದು.

ಮುನಿಯಾಲಿನಲ್ಲಿ ಮನೆಯೊಳಗೆ ಬಂದ ಕಾಳಿಂಗ ಸರ್ಪ ಸುಮಾರು 10 ಅಡಿ ಉದ್ದವಿತ್ತು. ಸುಮಾರು ಒಂದೂವರೆ ತಾಸು ಪ್ರಯತ್ನಪಟ್ಟು ಇದನ್ನು ಹಿಡಿಯಲಾಗಿದೆ.





























































































































error: Content is protected !!
Scroll to Top