ಕಾರ್ಕಳ : ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಏ. 9ರಂದು ಕುಕ್ಕುಂದೂರು ಗ್ರಾಮದ ಪಿಲಿಚಂಡಿ ಸ್ಥಾನದ ಬಳಿ ಸಂಭವಿಸಿದೆ.
ನೀರೆ ಗ್ರಾಮದ ದಿಲೀಪ್ ಎಂಬವರು ಬೈಕ್ ಸವಾರಿ ಮಾಡಿಕೊಂಡು ಬೈಲೂರಿನಿಂದ ಕಾರ್ಕಳದೆಡೆಗೆ ಬರುತ್ತಿದ್ದು ಪಿಲಿಚಂಡಿ ಸ್ಥಾನದ ಬಳಿ ತಲುಪುವಾಗ ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ನಾಗಾರಾಜ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದಿಲೀಪ್ ಕಾರಿನ ಗಾಜಿನ ಮೇಲೆ ಬಿದ್ದಿದ್ದು ಗಾಯಗೊಂಡಿರುತ್ತಾರೆ. ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಕಾರು ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ವಾಹನವೊಂದನ್ನು ಓವರ ಟೇಕ್ ಮಾಡಲು ಕಾರನ್ನು ರಸ್ತೆಯ ತೀರಾ ಬಲಕ್ಕೆ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾರು -ಬೈಕ್ ಡಿಕ್ಕಿ : ಸವಾರ ಆಸ್ಪತ್ರೆ ದಾಖಲು






























































