ನ್ಯೂ ವೈಬ್ರೆಂಟ್ ಕಾಲೇಜಿಗೆ ಕೆನಡಾದ ಸ್ವಾಮೀಜಿ ಭೇಟಿ

ಮೂಡಬಿದಿರೆ : ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿಗೆ ಮಾ. 30ರಂದು ಕೆನಡಾದ ಟೊರಾಂಟೋದಲ್ಲಿರುವ ರಾಮಕೃಷ್ಣ ಮಿಷನ್ನಿನ ಸ್ವಾಮಿ ಕೃಪಾಮಯಾನಂದರು ಭೇಟಿ ನೀಡಿದರು. ಕಾಲೇಜಿನ ಈವರೆಗಿನ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಮತ್ತು ಫಲಿತಾಂಶಗಳ ಮಾಹಿತಿ ಪಡೆದು ಮೆಚ್ಚುಗೆಯನ್ನು ಸೂಚಿಸಿದರು. ನಂತರ ಕಾಲೇಜಿನ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್.ಎನ್. ವೆಂಕಟೇಶ್ ನಾಯಕ್, ಟ್ರಸ್ಟಿಗಳಾದ ಶುಭಾಷ್ ಜಾ, ಚಂದ್ರಶೇಖರ್ ರಾಜೇ ಅರಸ್, ಎಸ್.ಮೆಹಬೂಬ ಬಾಷಾ, ಯೋಗೇಶ್ ಬೆಡೇಕರ್, ಶರತ್ ಗೋರೆ, ಅಮರೇಶ್ ಶರಣಪ್ಪ ಉಪಸ್ಥಿತರಿದ್ದರು.































































































































error: Content is protected !!
Scroll to Top