ಸ್ಕೂಟರ್‌ಗೆ ಕಾರು ಡಿಕ್ಕಿ : ಸವಾರ ಸಾವು

ಕಾರ್ಕಳ : ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಳಿ ಇರುವ ಅಧಿಧನ್‌ ಕಾಂಪ್ಲೆಕ್ಸ್‌ ಎದುರು ಗುರುವಾರ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸ್ಕೂಟರ್‌ ಸವಾರ ಮುದ್ದು ಮಾಧವ (84) ಎಂಬವರು ಮೃತಪಟ್ಟಿದ್ದಾರೆ. ಮುದ್ದು ಮಾಧವ ಅವರು ರಸ್ತೆಯ ಇನ್ನೊಂದು ಬದಿಗೆ ಹೋಗಲು ಸ್ಕೂಟರ್‌ ನಿಲ್ಲಿಸಿ ಕಾಯುತ್ತಿದ್ದ ವೇಳೆ ಇಕೋ ಕಾರು ಬಂದು ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದು ಮಾಧವ ಅವರ ಹೆಲ್ಮೆಟ್‌ ಕಳಚಿ ಹೋಗಿ ತಲೆಗೆ ಗಾಯವಾಗಿತ್ತು. ಕೂಡಲೇ ಅವರನ್ನು ಕಾರ್ಕಳದ ರೋಟರಿ ಆಸ್ಪತ್ರಗೆ ಒಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































































error: Content is protected !!
Scroll to Top