ಹೆಬ್ರಿ : ಮಹಿಳೆಯೋರ್ವರಿಗೆ ವರದಕ್ಷಿಣೆಗಾಗಿ ಮಾನಸಿಕ ಹಿಂಸೆ ನೀಡಿರುವುದಲ್ಲದೆ ಜೀವ ಬೆದರಿಕೆ ಹಾಕಿರುವ ಘಟನೆ ಚಾರ ಗ್ರಾಮದಲ್ಲಿ ಸಂಭವಿಸಿದೆ. ಅಶ್ವಿನಿ ಅವರು ಗಂಡ ರಾಘವೇಂದ್ರ, ಅತ್ತೆ ಸಂಜೀವಿ, ಮೈದುನ ಸುಬ್ರಮಣ್ಯ, ನಾದಿನಿ ನಾಗಶ್ರೀ ಮತ್ತು ನಾದಿನಿಯ ಗಂಡ ಸುಭಾಷ ಇವರು ವರದಕ್ಷಿಣೆಗಾಗಿ ಕಿರುಕುಳ ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿತರು ಅಶ್ವಿನಿಯವರ ಮೇಲೆ ವಿನಾ ಕಾರಣ ನಿಂದಿಸಿ ಅಪವಾದ ಹಾಕಿರುವುದಲ್ಲದೇ ಬಟ್ಟೆ, ಔಷಧಿ ಮತ್ತಿತರ ಖರ್ಚುಗಳಿಗೆ ಹಣವನ್ನು ನೀಡದೇ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಮತ್ತು ಇನ್ನು ಹೆಚ್ಚಿನ ವರದಕ್ಷಿಣೆ ನೀಡಬೇಕೆಂದು ಪೀಡಿಸುತ್ತಿದ್ದರು. ಅಲ್ಲದೆ ಅಶ್ವಿನಿಯವರ ಅಜ್ಜಿಗೆ ಸೇರಿದ ಆಸ್ತಿಯನ್ನು ರಾಘವೇಂದ್ರನ ಹೆಸರಿಗೆ ದಾಖಲೆ ಮೂಲಕ ಬರೆದು ಕೊಡಬೇಕು ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಅಶ್ವಿನಿ ತಾಯಿ ಮನೆಗೆ ವಾಪಾಸ್ಸು ಬಂದಿದ್ದು, ಮಾ. 22ರಂದು ರಾಘವೇಂದ್ರ ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಶ್ವಿನಿಯವರ ಮನೆಗೆ ಬಂದು ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಕುರಿತು ಅಶ್ವಿನಿ ನೀಡಿದ ಮಾಹಿತಿಯಂತೆ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.






























































