ಹೆಬ್ರಿ : ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ಪರಿವಾರ ಶಕ್ತಿಯಾದ ಬಚ್ಚಪ್ಪು ಮೇಲ್ಜಡ್ಡು ಶ್ರೀ ಧೂಮಾವತಿ ಸನ್ನಿಧಿಯಲ್ಲಿ
ದೇವತಾ ಪಾರ್ಥನೆ, ಚಕ್ರಾಬ್ಜ ಮಂಡಲಪೂಜೆ, ಸರ್ವಮೂಲ ಪಾರಾಯಣ, ಚಂಡಿಕಾಹೋಮ, ಪಂಚವಿಂಶತಿ ದ್ರವ್ಯಕಲಶ ಸ್ಥಾಪನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ , ಪರಿವಾರ ಭೈರವ ಗುಳಿಕಗಳಿಗೆ ನವಕಪ್ರಧಾನ ಹೋಮ ಕಲಶಾಭಿಷೇಕ, ಬ್ರಹ್ಮಸ್ಥಾನ, ನಾಗಸ್ಥಾನ, ಪಂಜುರ್ಲಿ ಸ್ಥಾನಗಳಲ್ಲಿ ನವಕಪ್ರಧಾನ, ಮಲಸಾವಿರ ಸ್ಥಾನದಲ್ಲಿ ಪನಿವಾರಪೂಜೆ. ಸಾರ್ವಜನಿಕ ಅನ್ನಸಂತರ್ಪಣೆ ಶನಿವಾರ ನೆರವೇರಿದೆ.
ಸಂಜೆ ಶ್ರೀ ಹರಿವಾಯು ಕೃಪಾಪೋಷಿತ ಧೂಮಾವತೀ ಯಕ್ಷಗಾನ ಕಲಾ ಸಂಘದಿಂದ “ಸಹಸ್ರಾರ ವೈಭವ” ಎಂಬ ತಾಳಮದ್ದಳೆ ಮತ್ತು ಭರತನಾಟ್ಯ ಪ್ರದರ್ಶನಗೊಂಡಿತು.
ರಾತ್ರಿ ದರ್ಶನ ಸೇವೆ, ಶ್ರೀ ನಾಗದೇವರಿಗೆ ಹಾಲಿಟ್ಟು ಸೇವೆ, ಶ್ರೀ ಬ್ರಹ್ಮದೇವರಿಗೆ ಢಕ್ಕೆಬಲಿ ಸೇವೆ, ಶ್ರೀ ಧೂಮಾವತಿ ನೇಮೋತ್ಸವ, ಹರಕೆ ಕೋಲಗಳು ಪ್ರಧಾನ ಅರ್ಚಕ ನಾಗ ಪಾತ್ರಿ ಬಚ್ಚಪ್ಪು ರಮೇಶ ಸೋಮಯಾಜಿ ನೇತೃತ್ವದಲ್ಲಿ ನಡೆಯಿತು.
ಸ್ಥಳವಂದಿಕ ಮಾಡಿಗೆ ಶಿವರಾಮ ಹೆಗ್ಡೆ, ವಿದ್ವಾನ್ ಡಾ. ಮಹೇಂದ್ರ ಸೋಮಯಾಜಿ, ನರಸಿಂಹ ಸೋಮಯಾಜಿ ಮತ್ತಿತರರು ಸಹಕರಿಸಿದರು. ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.

































































