ಅಜೆಕಾರು : ಕಡ್ತಲ ಗ್ರಾಮದ ವೆಂಕಟೇಶ ಎಂಬವರ ಇಂಡಕ್ಷನ್ ಮೋಟಾರ್ ಹಾಗೂ ಇನ್ನಿತರ ವಸ್ತುಗಳು ಕಳವಾಗಿರುವ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಅಕ್ಟೋಬರ್‌ನಿಂದ ಈ ಮಾರ್ಚ್ 5ರ ನಡುವೆ ಮನೆಯ ಹೊರಗೆ ಇಟ್ಟಿದ್ದ 50 ಎಚ್‌ಪಿ ಇಂಡಕ್ಷನ್ ಮೋಟಾರ್, ಮನೆಯ ಬಳಿ ಇರುವ ಕ್ರಶರ್‌ನಲ್ಲಿ ಅಳವಡಿಸಿದ್ದ 10 ಎಚ್‌ಪಿ ಇಂಡಕ್ಷನ್ ಮೋಟಾರ್, 7.5 ಎಚ್‌ಪಿ ಇಂಡಕ್ಷನ್ ಮೋಟಾರ್, 5 ಎಚ್‌ಪಿ ಇಂಡಕ್ಷನ್ ಮೋಟಾರ್, ಅಡ್ಜೆಸ್ಟ್‌ಮೆಂಟ್ ರೋಲರ್ ಸೆಟ್, ಗೋದಾಮಿನಲ್ಲಿದ್ದ ಕ್ರಶರ್ ಸಾಮಗ್ರಿಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ ಎಂದು ವೆಂಕಟೇಶ ದೂರು ನೀಡಿದ್ದಾರೆ.
ಅಜೆಕಾರು : ಕ್ರಶರ್ ಇಂಡಕ್ಷನ್ ಮೋಟಾರ್ ಕಳವು






























































