ಅನಂತಪುರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಖರ್ಗೆ
ಅನಂತಪುರ : ಕರ್ನಾಟಕ, ತೆಲಂಗಾಣದಲ್ಲಿ ಗ್ಯಾರಂಟಿಗಳ ಯಶಸ್ಸಿನ ನಂತರ ಆಂಧ್ರಪ್ರದೇಶದಲ್ಲೂ ಅದೇ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಮುಂದುವರಿಸಿದೆ. ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಆಂಧ್ರಪ್ರದೇಶದಲ್ಲಿ ಪ್ರಚಾರ ಶುರು ಮಾಡಿರುವ ಕಾಂಗ್ರೆಸ್, ಅರ್ಹ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂ. ನೀಡುವುದಾಗಿ ಘೋಷಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಂತಪುರದಲ್ಲಿ ಬಡ ಕುಟುಂಬಗಳಿಗೆ ಹೊಸ ಗ್ಯಾರಂಟಿಯನ್ನು ಘೋಷಿಸಿದರು. ಕರ್ನಾಟಕದಲ್ಲಿ ಜಾರಿ ಮಾಡಿದ 5 ಗ್ಯಾರಂಟಿ ಹಾಗೂ ತೆಲಂಗಾಣದಲ್ಲಿ ಅನುಷ್ಠಾನಕ್ಕೆ ತಂದಿರುವ 6 ಗ್ಯಾರಂಟಿಗಳಿಗಿಂತ ದೊಡ್ಡ ಗ್ಯಾರಂಟಿ ಎಂದು ಕರೆಯಲಾಗಿದೆ. ಭಾರತದ ಯಾವುದೇ ರಾಜ್ಯದಲ್ಲಿರದ ಭರವಸೆಯನ್ನು ಬಡವರಿಗೆ ನಾವು ನೀಡುತ್ತಿದ್ದೇವೆ. ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ 5,000 ರೂ. ಸಿಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.










































