ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಮಾಸಿಕ ಕಾರ್ಯಕ್ರಮ ಕಥಾಗೋಷ್ಠಿ ಫೆ. 25ರಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಗಂಗಾಧರ ಪಣಿಯೂರು ಕಥಾ ಸಂರಚನೆ ಮತ್ತು ಕಥಾ ಪ್ರಕಾರಗಳ ಕುರಿತು ಮಾಹಿತಿ ನೀಡಿದರು ಮತ್ತು ಕಥೆಗಳನ್ನು ವಿಮರ್ಶಿಸಿ ಕಥಾ ಕೌಶಲದ ಬಗ್ಗೆ ಅರಿವು ಮೂಡಿಸಿದರು.
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸದಸ್ಯರಾದ ಶ್ಯಾಮಲಾ ಗೋಪಿನಾಥ್, ಸಾವಿತ್ರಿ ಮನೋಹರ್, ಅನುಪಮಾ ಚಿಪ್ಲುಂಕರ್, ಶೈಲಜಾ ಹೆಗ್ಡೆ, ಡಾ. ಸುಮತಿ ಪಿ., ವಸುಧಾ ಶೆಣೈ, ಮಾಲತಿ ಜಿ. ಪೈ, ಶ್ರೀ ಮುದ್ರಾಡಿ, ಪ್ರಜ್ಞಾವಾಣಿ ಗೋರೆ, ರೇಖಾ ವಸಂತ್ ಕಥಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಗೀತಾ ಆರ್. ಮರಾಠೆ ಪ್ರಾರ್ಥಿಸಿದರು. ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿದರು. ಬಿ. ವಿ. ಸುಲೋಚನಾ ಕಾರ್ಯಕ್ರಮ ನಿರೂಪಿಸಿ, ಶಕುಂತಲಾ ಜಿ. ಅಡಿಗ ವಂದಿಸಿದರು.
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ – ಕಥಾಗೋಷ್ಠಿ

























