ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪುಲ್ವಾಮ ಹುತಾತ್ಮ ಯೋಧರಿಗೆ ನಮನ

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪುಲ್ವಮಾ ಹುತಾತ್ಮ ಯೋಧರಿಗೆ ಫೆ. 14ರ ರಾತ್ರಿ ಸರ್ವಜ್ಞ ವೃತ್ತ ಬಳಿ ವೀರ ನಮನ ಅರ್ಪಿಸಲಾಯಿತು. ಮಂಗಳೂರು ವಿಭಾಗ ಸಂಘಟನ ಕಾರ್ಯದರ್ಶಿ ಶ್ರೀರಾಮ್ ಅಂಗಿರಸರವರು ಮಾತನಾಡಿ, ಯೋಧರು ತಮ್ಮ ಕುಟುಂಬವನ್ನು ಬಿಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ. ಆದರೆ ಸಮಾಜವನ್ನು ಯುವಕರು ರಕ್ಷಣೆ ಮಾಡುವ ಕಾರ್ಯವನ್ನು ಮಾಡಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕ ಶ್ರೇಯಸ್ ಅಂಚನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪವನ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಸೌಮ್ಯ ನಾಯ್ಕ್, ತಾಲೂಕು ಎಸ್‌ಎಫ್‌ಡಿ ಪ್ರಮುಖ್ ವಿನೀತ್ ರಾವ್, ನಗರ ಸಹ ಕಾರ್ಯದರ್ಶಿ ಕಾರ್ತಿಕ್, ಕಾರ್ಯಕರ್ತರಾದ ಸುಶಾನ್, ಸರ್ವೇಶ್, ಮನೋಜ್ ಹಾಗೂ ವಿದ್ಯಾರ್ಥಿಗಳು, ಆಟೋ ಚಾಲಕರು ಉಪಸ್ಥಿತರಿದ್ದರು. ತಾಲೂಕು ಸಹ ವಿದ್ಯಾರ್ಥಿನಿ ಪ್ರಮುಖ್ ಮನ್ವಿತಾ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.



















































































error: Content is protected !!
Scroll to Top