ಫೆ. 20, 21, 23 : ಕಾರ್ಕಳ ಹೆಬ್ರಿ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ : 220/110/11ಕೆವಿ ಕೇಮಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಫೀಡರ್ ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ಮಿಯ್ಯಾರ್, ಸಾಣೂರು, ಇರ್ವತ್ತೂರು, ನಿಟ್ಟೆ ವಾಟರ್ ಸಪ್ಲೈ ಫೀಡರ್ ನಲ್ಲಿ 110/11ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11 ಕೆವಿ ಪದವು ಫೀಡರ್ ಹಾಗೂ 110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಫೀಡರ್ ಗಳಾದ ಬೋಳ, ಬೆಳ್ಮಣ್, ನಂದಳಿಕೆ, ಮುಂಡ್ಕೂರು ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಫೆ. 20ರ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ನಲ್ಲಿ ವ್ಯತ್ಯಯವಾಗಲಿದೆ.
ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಲೈ, ಬೊರ್ಗಲ್ ಗುಡ್ಡೆ, ಹಾಮಾಜಿ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರೀಸ್‌, ದೂಪದಕಟ್ಟೆ, ಕೆಮ್ಮಣ್ಣು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು, ಬೊರ್ಕಟ್ಟೆ, ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಸಾಣೂರು, ಕುಂಟಲ್ಪಾಡಿ, ದೇಂದಬೆಟ್ಟು, ಪರ್ಪಲೆ, ಪಡ್ಡಾಯಿಗುಡ್ಡೆ, ಮುದ್ದಣ್ಣ ನಗರ, ಬಾವಗುತ್ತು, ಶುಂಠಿಗುಡ್ಡೆ, ಚಿಲಿಂಬಿ, ಬೋಳ ಪಂಚಾಯತ್, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರೆಬೈಲು, ಕೆಂಪುಜೋರ, ಪುಕ್ಕಲ್ಲು, ಬೆಳ್ಳಣ್ ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಳಣ್ ದೇವಸ್ಥಾನ. ನಂದಳಿಕೆ, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಮುಂಡೂರು, ಮುಲ್ಲಡ್ಕ, ಕೊಡಿಮಾರ್, ನಾನಿಲ್ ತಾರ್, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಫೆ. 21 : ಹೆಬ್ರಿ ಭಾಗದಲ್ಲಿ ವಿದ್ಯುತ್‌ ಸ್ಥಗಿತ
33/11 ಕೆವಿ ಹೆಬ್ರಿ ಉಪ ವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆವಿ ಶಿವಪುರ, ಹೆಬ್ರಿ ಮತ್ತು 33ಕೆವಿ ಅಜೆಕಾರ್ ಫೀಡರ್ ನಲ್ಲಿ ಮಾರ್ಗ ನಿರ್ವಹಣಾ ಕಾಮಗಾರಿ ಮತ್ತು ಮಾರ್ಗ ರಚನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 21ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ವರೆಗೆ ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಾಸ್ಥಾನದ ಬಳಿ, ಮುಳ್ಳುಗುಡ್ಡೆ, ಶಿವಪುರ, ಮಠದಬೆಟ್ಟು, ಗುಳಿಬೆಟ್ಟು, ಹೆಬ್ರಿ ಪೇಟೆ, ಕಡ್ತಲ, ದೊಂಡರಂಗಡಿ, ಗುಡ್ಡೆಯಂಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಫೆ. 23 : ಅಜೆಕಾರು ಭಾಗದಲ್ಲಿ ವಿದ್ಯುತ್‌ ವ್ಯತ್ಯಯ
33 ಕೆವಿ ಹೆಬ್ರಿ ಉಪ ವಿದ್ಯುತ್ ಸ್ಥಾವರದಿಂದ ಹೊರಡುವ 33 ಕೆವಿ ಅಜೆಕಾರ್ ಫೀಡರ್ ನಲ್ಲಿ ಮಾರ್ಗ ರಚನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಫೆ. 23ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಡ್ತಲ, ದೊಂಡರಂಗಡಿ, ಎಳ್ಳಾರೆ, ಗುಡ್ಡೆಯಂಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.



















































































error: Content is protected !!
Scroll to Top