ಫೆ. 25 : ಯುವವಾಹಿನಿ ಕಾರ್ಕಳ ಘಟಕ – ಕಾರ್ಲ ಯುವೋತ್ಸವ 2024

ಕಾರ್ಕಳ : ಯುವವಾಹಿನಿ ಕಾರ್ಕಳ ಘಟಕದ ಆಯೋಜಿಸುವ ಕಾರ್ಲ ಯುವೋತ್ಸವ – ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡ ಸಾಂಸ್ಕೃತಿಕ ಸ್ಪರ್ಧೆ ಫೆ. 25 ರಂದು ಸಾಲ್ಮರ ಗ್ಯಾಲಕ್ಸಿ ಹಾಲ್‌ನಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಮೊದಲು ನೋಂದಾಯಿಸಿದ 12 ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ.

ಬಹುಮಾನ
ಪ್ರಥಮ ಬಹುಮಾನ 25 ಸಾ. ರೂ. ನಗದು ಮತ್ತು ಪ್ರಶಸ್ತಿ, ದ್ವಿತೀಯ ಬಹುಮಾನ ರೂಪಾಯಿ 15 ಸಾ. ರೂ. ನಗದು ಮತ್ತು ಪ್ರಶಸ್ತಿ ತೃತೀಯ ಬಹುಮಾನ ರೂಪಾಯಿ 10 ಸಾ. ರೂ. ನಗದು ಮತ್ತು ಪ್ರಶಸ್ತಿ ಹಾಗೆಯೇ ಉತ್ತಮ ನಿರೂಪಕರು ಅಥವಾ ನಿರೂಪಕಿ, ಉತ್ತಮ ನಟ, ಉತ್ತಮ ನಟಿ, ಪ್ರಶಸ್ತಿ ನೀಡಲಾಗುವುದು. ಇದಲ್ಲದೆ ಭಾಗವಹಿಸುವ ಎಲ್ಲಾ ತಂಡಗಳಿಗೂ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.

ನಿಯಮಾವಳಿಗಳು :

  1. ಸ್ಪರ್ಧಿಸುವ ತಂಡಗಳು ತಮ್ಮ ತಂಡಗಳನ್ನು ನಮ್ಮಲ್ಲಿ ನೋಂದಾಯಿಸಲು ಕೊನೆಯ ದಿನಾಂಕ 14-02-2024
  2. ತಂಡದಲ್ಲಿ ಕನಿಷ್ಠ 8 ಸದಸ್ಯರು ಹಾಗೂ ಗರಿಷ್ಠ 30 ಸದಸ್ಯರು ಭಾಗವಹಿಸಬಹುದು. ಅದಕ್ಕಿಂತ ಹೆಚ್ಚು ಸದಸ್ಯರು ಕಂಡು ಬಂದಲ್ಲಿ ಅಂಕ ಕಡಿತಗೊಳಿಸಲಾಗುವುದು.
  3. ಪ್ರತಿಯೊಂದು ತಂಡಕ್ಕೂ 8 + 2 ನಿಮಿಷಗಳ ಕಾಲಾವಧಿ ನೀಡಲಾಗುವುದು. ಈ ಸಮಯದೊಳಗೆ ತಮ್ಮ ಪ್ರಸ್ತುತಿ ಮುಕ್ತಾಯವಾಗಬೇಕು. ಸಮಯ ಮೀರಿದಲ್ಲಿ ಅಂಕ ಕಡಿತಗೊಳಿಸಲಾಗುವುದು. ಕನಿಷ್ಠ ಪ್ರಸ್ತುತಿ 8 ನಿಮಿಷ ಇರಬೇಕು. ಗರಿಷ್ಠ 10 ನಿಮಿಷ.
  4. ತಂಡಕ್ಕೆ ನೀಡುವ 10 ನಿಮಿಷದ ಕಾಲಾವಕಾಶದಲ್ಲಿ ನೀವು ಲೈವ್ ಅಥವಾ ಸ್ವರಮುದ್ರಿಕೆಯಲ್ಲಿ ಯಾವುದೇ ರೀತಿಯ ಕಾರ್ಯಕ್ರಮ ನೀಡಬಹುದು, ಹಾಡು, ನೃತ್ಯ, ನಾಟಕ, ಮಿಮಿಕ್ರಿ, ಮೈಮ್ ಬಳಸಬಹುದು. ಯಾವುದೇ ರೀತಿಯ ಧರ್ಮ, ಜಾತಿ, ವ್ಯಕ್ತಿ ಹಾಗೂ ದೈವರಾಧನೆಯ ಬಗ್ಗೆ ಅವಹೇಳನ ಮಾಡಲು, ಹಾಗೆಯೇ ಅಶ್ಲೀಲ ಕಾರ್ಯಕ್ರಮ ನೀಡಲು ಕಡ್ಡಾಯವಾಗಿ ಅವಕಾಶವಿರುವುದಿಲ್ಲ.
  5. ಅಪಾಯಕಾರಿಯಾಗಬಲ್ಲ ಬೆಂಕಿ, ಸ್ಪೋಟಕಗಳು, ಪ್ರಾಣಿ ಪಕ್ಷಿಗಳನ್ನು ವೇದಿಕೆಗೆ ತರುವುದು ಮತ್ತು ನೀರು ಇನ್ನಿತರ ವಸ್ತುಗಳನ್ನು ವೇದಿಕೆಯಲ್ಲಿ ಚೆಲ್ಲುವುದಕ್ಕೆ ಅವಕಾಶವಿಲ್ಲ. ಇದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. (ವೇದಿಕೆಗೆ ಸಣ್ಣ ಹಣತೆ ತರಲು ಅವಕಾಶವಿದೆ.)
  6. ಪ್ರತಿ ತಂಡಕ್ಕೆ ವೇದಿಕೆ ಸಿದ್ಧಪಡಿಸಲು 4 ನಿಮಿಷ ನೀಡಲಾಗುವುದು ಮತ್ತು 4 ನಿಮಿಷ ಮುಗಿದ ಕೂಡಲೇ ವೇದಿಕೆಯ ಮುಖ್ಯ ಪರದೆ ತೆರೆಯಲಾಗುವುದು. ತೆರೆದ ಕೂಡಲೇ ನಿಮ್ಮ 10 ನಿಮಿಷದ ಸಮಯ ಪ್ರಾರಂಭವಾಗುತ್ತದೆ. 10 ನಿಮಿಷ ಮುಗಿದ ಕೂಡಲೇ ರಂಗಸಜ್ಜಿಕೆಯ ತೆರವಿನ ಸಮಯ ಆರಂಭವಾಗುತ್ತದೆ ಹಾಗೂ ಮುಂದಿನ 4 ನಿಮಿಷದಲ್ಲಿ ವೇದಿಕೆ ತೆರವುಗೊಳಿಸದಿದ್ದಲ್ಲಿ ನಿಮಿಷಕ್ಕೊಂದು ಅಂಕದಂತೆ ಕಡಿತವಾಗುವುದು.
  7. ಪ್ರದರ್ಶನ ಮುಗಿದ ತಕ್ಷಣ ವಿಮರ್ಶಕರ ವಿಮರ್ಶೆಗೆ ಕಿವಿಯಾಗಲು ತಂಡಕ್ಕೆ ಕೋರಿಕೆ.
  8. ಕಾಲರ್ ಮೈಕ್ ಉಪಯೋಗಕ್ಕೆ ಅವಕಾಶವಿಲ್ಲ.
  9. ತೀರ್ಪುಗಾರರ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ.
  10. ಅಂಕಗಳ ಹಂಚಿಕೆ- ನಿಮ್ಮ ಪ್ರದರ್ಶನದ ಪ್ರಸ್ತುತಿ 20 ಅಂಕ, ಹೊಂದಾಣಿಕೆಗೆ 20 ಅಂಕ, ಸಂದೇಶ 20 ಅಂಕ, ಸೃಜನಶೀಲತೆಗೆ 20 ಅಂಕ ಹಾಗೂ ಪರಿಕಲ್ಪನೆ 20 ಅಂಕ ಹೀಗೆ ಒಟ್ಟು 100 ಅಂಕಗಳು ಇರಲಿದೆ.

ಹೆಚ್ಚಿನ ಮಾಹಿತಿಗಾಗಿ 9844681306 (ಅರುಣ್‌ ಪೂಜಾರಿ ಮಾಂಜ – ಅಧ್ಯಕ್ಷರು), 9448608426 (ಸುಧಾಕರ್‌ ಕಾರ್ಕಳ – ಸಂಚಾಲಕರು), 9980752152 (ಪ್ರಶಾಂತ್‌ ಬಜಗೋಳಿ – ಕಾರ್ಯದರ್ಶಿ) ಅಥವಾ 9844896933 (ಸಂದೇಶ್‌ ಕೋಟ್ಯಾನ್‌ – ಸಾಂಸ್ಕೃತಿಕ ಕಾರ್ಯದರ್ಶಿ) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































































































































error: Content is protected !!
Scroll to Top