ಕಾರ್ಕಳ : ಕೆರ್ವಾಶೆ ಯುವಜನ ವೇದಿಕೆ ಮತ್ತು ಕೆರ್ವಾಶೆ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 34ನೇ ವರ್ಷದ ಸಂಯುಕ್ತ ವಾರ್ಷಿಕೋತ್ಸವ ಜ. 26 ರಂದು ನಡೆಯಲಿದೆ.
ಧ್ವಜಾರೋಹಣ
ಬೆಳಗ್ಗೆ 9.30ಕ್ಕೆ ಧ್ವಜಾರೋಹಣ ನಡೆಯಲಿದ್ದು, ಕೆರ್ವಾಶೆ ಗ್ರಾ. ಪಂ. ಅಧ್ಯಕ್ಷೆ ಸುನಿತಾ ಅಮಿನ್ ಧ್ವಜಾರೋಹಣ ಮಾಡಲಿರುವರು. ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವತ್ಥನಾರಾಯಣ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಪದ್ಮನಾಭ ಭಟ್ ಉದ್ಘಾಟಿಸಲಿರುವರು. ಉದ್ಯಮಿ ಉದಯ್ ಶೆಟ್ಟಿ ಕೆರ್ವಾಶೆ ಶಿಲಾಫಲಕ ಅನಾವರಣ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರು, ಇಲಾಖಾ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರುವರು.
ಈ ಸಂದರ್ಭ ಶಾಲಾ ಮಕ್ಕಳ ಪಥಸಂಚಲನ, ವರ್ಗಾವಣೆಗೊಂಡ ಶಿಕ್ಷಕರಿಗೆ ಅಭಿನಂದನೆ, ಛದ್ಮವೇಷ ಸ್ಪರ್ಧೆ ಮತ್ತು ಬಹುಮಾನ ವಿತರಣೆ ನಡೆಯಲಿದೆ.
ಸಭಾ ಕಾರ್ಯಕ್ರಮ
ರಾತ್ರಿ 8ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ನ್ಯಾಯವಾದಿ ಎಂ.ಕೆ. ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಲಾಖಾ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 6.30ರಿಂದ ಅಂಗನವಾಡಿ ಪುಟಾಣಿಗಳಿಂದ ನೃತ್ಯಗಳು, ಪಾಲ್ದಾಕ್ಯಾರು ಸ.ಕಿ. ಪ್ರಾ. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಂತರ ಮೈನ್ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಬಳಿಕ ವಿದ್ಯಾರ್ಥಿಗಳಿಂದ ಕನ್ನಡ ಪೌರಾಣಿಕ ನಾಟಕ ಜ್ವಾಲಾ ನಡೆಯಲಿದ್ದು ನಂತರ ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಬಳಿಕ ಯುವಜನ ವೇದಿಕೆ ಸದಸ್ಯರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಬದ್‌ಕೊಂಜಿ ಅಲೆಗಾದ್ ಪ್ರದರ್ಶನಗೊಳ್ಳಲಿದೆ.


































































