ಮೂಜೂರು : ಬೈಕ್‌ಗಳ ನಡುವೆ ಡಿಕ್ಕಿ – ಸವಾರನಿಗೆ ಗಾಯ

ಕಾರ್ಕಳ : ಬೈಕ್‌-ಬೈಕ್‌ಗಳ ನಡುವೆ ಡಿಕ್ಕಿಯಾದ ಪರಿಣಾಮ ಸವಾರ ಗಾಯಗೊಂಡ ಘಟನೆ ಡಿ. 27 ರಂದು ಹಿರ್ಗಾನ ಗ್ರಾಮದ ಮುಜೂರು ಎಂಬಲ್ಲಿ ಸಂಭವಿಸಿದೆ.
ಕುಂದಾಪುರ ಹೊಸಂಗಡಿ ಗ್ರಾಮ ಸುರೇಶ್‌ ಎಂಬವರು ಮೂಜೂರಿನಲ್ಲಿ ಹೋಗುತ್ತಿದ್ದಾಗ ಮುಂಭಾಗದಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ KA-20-K-7548 ನಂಬ್ರದ ಬೈಕ್ ಸವಾರ ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಲೇ ಬೈಕ್‌ನ್ನು ಬಲಬದಿಗೆ ಚಲಾಯಿಸಿದ ಸಂದರ್ಭ ಸುರೇಶ್‌ ಅವರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸುರೇಶ್‌ ಅವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು, ಕೈ ಕಾಲುಗಳಿಗೆ ಗಾಯವಾಗಿದೆ. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಅವರು ನಂತರ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ – ಸವಾರರಿಗೆ ಗಾಯ
ಡಿ. 28 ರಂದು ಮಧ್ಯಾಹ್ನ ಕಸಬಾ ಗ್ರಾಮದ ರಾಘವೇಂದ್ರ ಸ್ವಾಮಿ ಮಠದ ಬಳಿ ಕಾರ್ಕಳ ಕಡೆಯಿಂದ ತೆಳ್ಳಾರ್ ಕಡೆಗೆ ಸಾಗುತ್ತಿದ್ದ KA-20-M-942ನೇ ನಂಬ್ರದ ಟ್ರ್ಯಾಕ್ಟರ್‌ ತೆಳ್ಳಾರು ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡಿದಿದೆ. ಪರಿಣಾಮವಾಗಿ ಬೈಕ್‌ ಸವಾರ ಹರೀಶ್‌ ಹಾಗೂ ಹಿಂಬದಿ ಸವಾರೆ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಹರೀಶ್‌ ಅವರ ತಲೆ ಹಾಗೂ ಹಿಂಬದಿ ಸವಾರೆಯ ಕೈ ಕಾಲಿಗೆ ಗಾಯವಾಗಿದೆ. ಗಾಯಾಳುಗಳು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top