ಜ. 7 : ವಿಶ್ವ ಸ್ವರ್ಣ ಟ್ರೋಫಿ – 2024 : ಹಗ್ಗಜಗ್ಗಾಟ

ಕಾರ್ಕಳ : ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಆಶ್ರಯದಲ್ಲಿ ಆರೋಗ್ಯ ಮತ್ತು ವಿದ್ಯಾನಿಧಿ ಸಹಾಯಾರ್ಥವಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಪುರುಷರ ಮತ್ತು ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಪಂದ್ಯಾಕೂಟವು ಜ. 7 ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 9ರಿಂದ ಜರುಗಲಿರುವುದು.

ನಿಯಮಗಳು
ಪುರುಷರ ಒಂದು ತಂಡದ ತೂಕ 575ಕೆ.ಜಿ. ಮೀರದಂತೆ 7 ಸದಸ್ಯರಿಗೆ ಅವಕಾಶ ಮತ್ತು ಓರ್ವ ಮೀಸಲು ಆಟಗಾರ ಪ್ರತ್ಯೇಕ. ಆಧಾರ್‌ ಕಾರ್ಡ್ ಕಡ್ಡಾಯ. ಮಹಿಳೆಯರ ವಿಭಾಗದಲ್ಲಿ 7+1 ಸದಸ್ಯರಿಗೆ ಅವಕಾಶ ಮತ್ತು ತೂಕದ ಮಿತಿಯಿಲ್ಲ, ಡಿ. 30ರೊಳಗೆ ತಂಡದ ಹೆಸರನ್ನು ಪ್ರವೇಶ ಶುಲ್ಕದೊಂದಿಗೆ ನೋಂದಾಯಿಸಬೇಕು. ಒಂದು ತಂಡದಲ್ಲಿ ಆಡಿದ ಆಟಗಾರ ಇನ್ನೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ. ಶಿಸ್ತುಬದ್ಧ ತಂಡವನ್ನು ಪುರಸ್ಕರಿಸಲಾಗುವುದು.

ಬಹುಮಾನ
ಪುರಷರ ಮತ್ತು ಮಹಿಳೆಯರ ಪ್ರಥಮ ಪ್ರಶಸ್ತಿ ವಿಜೇತರಿಗೆ ಹಗ್ಗಜಗ್ಗಾಟ ಪ್ರತಿಕೃತಿಯ ಬೆಳ್ಳಿಯ ಕಿರು ಟ್ರೋಫಿ ನೀಡಿ ಗೌರವಿಸಲಾಗುವುದು. ಪ್ರಥಮ ಬಹುಮಾನ ಪುರಷರಿಗೆ ರೂ. 11,111/- ಹಾಗೂ ದ್ವಿತೀಯ ಬಹುಮಾನ 6,666/- ಮಹಿಳೆಯರ ತಂಡಕ್ಕೆ ಪ್ರಥಮ 7,777/- ದ್ವಿತೀಯ 4,444/- ಮತ್ತು ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9844995533, 9242464573, 9945809010 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.















































































































































error: Content is protected !!
Scroll to Top