41 ಸಾವಿರ ರೂ. ಮೌಲ್ಯದ ಪಟಾಕಿ ವಶ

ಕಾರ್ಕಳ : ಮುಂಡ್ಕೂರು ಸಮೀಪ ಸಚ್ಚೇರಿಪೇಟೆಯ ಅಂಗಡಿಯೊಂದರಲ್ಲಿ ನಿಯಮ ಉಲ್ಲಂಘಿಸಿ ದಾಸ್ತಾನು ಇರಿಸಿದ್ದ ಸಾವಿರಾರು ರೂ. ಮೌಲ್ಯದ ಪಟಾಕಿಗಳನ್ನು ಕಾರ್ಕಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪರವಾನಗಿ ಪಡೆದುಕೊಂಡು ಕೆಮಿಕಲ್ ಕಡಿಮೆ ಇರುವ ಹಸಿರು ಪಟಾಕಿಗಳನ್ನು ದಾಸ್ತಾನು ಮಾಡಬೇಕು ಮತ್ತು ಅದಕ್ಕೆ ಪ್ರತ್ಯೇಕವಾದ ಗೋದಾಮು ಮಾಡಿ 7 ಅಡಿ ಎತ್ತರದ ಕಂಪೌಂಡನ್ನು ಸುತ್ತಲೂ ನಿರ್ಮಿಸಬೇಕು. ಅಲ್ಲದೆ ಗೋದಾಮಿನ ಸುತ್ತಲೂ 100 ಮೀಟರ್ ದೂರದಲ್ಲಿ ಯಾವುದೇ ವಾಸದ ಮನೆಗಳು ಇರದಂತೆ ನಿಯಮಗಳಿವೆ.
ಆದರೆ ಈ ನಿಯಮ ಉಲ್ಲಂಘಿಸಿ ಜನರಲ್ ಸ್ಟೋರ್ಸ್‌ನಲ್ಲಿ ಪಟಾಕಿ ದಾಸ್ತಾನು ಇರಿಸಿದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿ ಸುಮಾರು 41,370ರೂ. ಮೌಲ್ಯದ 38 ಕೆ.ಜಿ. ಪಟಾಕಿ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































error: Content is protected !!
Scroll to Top