ಅಪರಿಚಿತರ ಗುಂಡೇಟಿಗೆ ಬಲಿಯಾದ ಜೈಶ್ ಉಗ್ರ ಮೌಲಾನಾ ರಹೀಂ ಉಲ್ಲಾ ತಾರೀಖ್
ಕರಾಚಿ: ಭಾರತದ ಅತಿ ಅಪೇಕ್ಷಿತ ಉಗ್ರ ಜೈಶ್-ಇ-ಮೊಹಮ್ಮದ್ ಸ್ಥಾಪಕ ಅಜರ್ ಮಸೂದ್‌ನ ಉಲಗೈಯಂತಿದ್ದ ಉಗ್ರ ಲ್ಲಿ ಉಗ್ರ ಕೃತ್ಯಕ್ಕೆ ಮೌಲಾನಾ ರಹೀಂ ಉಲ್ಲಾ ತಾರೀಖ್‌ನನ್ನು ನಿನ್ನೆ ರಾತ್ರಿ ಅಜ್ಞಾತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ. ಇದರೊಂದಿಗೆ ಪಾಕಿಸ್ಥಾನದಲ್ಲಿ ನಿಗೂಢವಾಗಿ ಹತ್ಯೆಯಾದ ಉಗ್ರರ ಸಂಖ್ಯೆ 20ಕ್ಕೇರಿದೆ. ಕರಾಚಿಯ ಒರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತರ ಗುಂಡೇಟಿಗೆ ತಾರೀಖ್ ಬಲಿಯಾಗಿದ್ದಾನೆ.
ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನ ಆಪ್ತನಾಗಿದ್ದ ತಾರೀಖ್ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಯುವಕರನ್ನು ನೇಮಿಸುತ್ತಿದ್ದ.
ನಿನ್ನೆ ರಾತ್ರಿ ಮಸೀದಿಗೆ ಪ್ರಾರ್ಥನೆ ತೆರಳುವಾಗ ಅಪರಿಚಿತ ವ್ಯಕ್ತಿಗಳು ತಾರೀಖ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಇದನ್ನು ಉದ್ದೇಶಿತ ಹತ್ಯೆ ಎಂದು ಕರೆದಿದ್ದಾರೆ. ವಿಧಿವಿಜ್ಞಾನ ತಂಡ ತಾರೀಖ್‌ನಿಂದ ಮೊಬೈಲ್ ಫೋನ್ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ.
3 ದಿನ ಹಿಂದಷ್ಟೇ ಲಷ್ಕರ್ ಉಗ್ರ ಅಕ್ರಂ ಖಾನ್ ಘಜೈನನ್ನು ಪಾಕ್‌ನ ಬಜ್‌ನಲ್ಲಿ ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 2018ರ ಕಾಶ್ಮೀರದ ಸಂಜುವಾನ್ ಭಯೋತ್ಪಾದಕ ದಾಳಿಯ ರೂವಾರಿ ಸ್ವಾಜಾ ಶಾಹಿದ್, ಕಳೆದ ವಾರವಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶವವಾಗಿ ಪತ್ತೆಯಾಗಿದ್ದ.
ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ. ತಾರೀಖ್ ಅವನ ಬಲಗೈ ಬಂಟನಂತಿದ್ದ ಹಾಗೂ ಕಾಶ್ಮೀರದಲ್ಲಿ ನಡೆ ಅನೇಕ ಭಯೋತ್ಪಾದಕ ಕೃತ್ಯಗಳಿಗೆ ಆತ ಮಾಸ್ಟರ್‌ಮೈಂಡ್ ಆಗಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ.






































































