ಕನ್ನಡದ ಕಂಪು ಮನೆ-ಮನಗಳಲ್ಲಿ ಪಸರಿಸಲಿ – ಶ್ರೀನಿವಾಸ್ ಭಂಡಾರಿ
ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ವತಿಯಿಂದ ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್‌ನ ಸಹಯೋಗದಲ್ಲಿ ನಡೆಯುತ್ತಿರುವ ನವೆಂಬರ್ ತಿಂಗಳ ಸಡಗರ-2023 ಕಾರ್ಯಕ್ರಮದ ಅಂಗವಾಗಿ ನ. 7 ರಂದು ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾನಯಾನ – ಕನ್ನಡ ಗೀತಗಾಯನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮಾತನಾಡಿ, ಕನ್ನಡ ಗೀತಗಾಯನದ ಮೂಲಕ ವಿದ್ಯಾರ್ಥಿಗಳಲ್ಲಿ ಸದಭಿರುಚಿಯನ್ನು ಮೂಡಿಸಿ ಕನ್ನಡದ ಕಂಪು ಮನೆ-ಮನಗಳಲ್ಲಿ ಪಸರಿಸಲಿ ಎಂದರು.
ಲಯನ್ಸ್ ಅಧ್ಯಕ್ಷ ರಘುರಾಮ ಶೆಟ್ಟಿ ಮಾತನಾಡುತ್ತಾ ಚಾಣಕ್ಯ ಸಂಸ್ಥೆ ಹಮ್ಮಿಕೊಂಡ ಗೀತಗಾಯನ ಕಾರ್ಯಕ್ರಮ ಪ್ರತಿ ಹಳ್ಳಿ ಹಳ್ಳಿಗೂ ತಲುಪಲಿ ವಿದ್ಯಾರ್ಥಿಗಳ ಬಾಯಲ್ಲಿ ಕನ್ನಡ ಗೀತೆಗಳು ಸದಾ ನಲಿದಾಡಲಿ ಎಂದು ಹೇಳಿದರು. ಇದೇ ಸಂದರ್ಭ ಇವರು ಸ್ವರಚಿತ ಕವನ ವಾಚಿಸಿದರು.

ಹೆಬ್ರಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ ಪೂಜಾರಿ, ನಿವೃತ್ತ ಶಿಕ್ಷಕ ಗಣಪತಿ ಪೈ ಉಪಸ್ಥಿತರಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಬೇಳಂಜೆ ಕಾರ್ಯಕ್ರಮ ನಿರ್ವಹಿಸಿದರು.

















































































