ಇಂದು ಮಧ್ಯರಾತ್ರಿ ಬಳಿಕ ಖಂಡಗ್ರಾಸ ಚಂದ್ರಗ್ರಹಣ

ದೇವಸ್ಥಾನಗಳಲ್ಲಿ ರಾತ್ರಿ ಅನ್ನಪ್ರಸಾದವಿಲ್ಲ

ಕಾರ್ಕಳ : ಇಂದು ಮಧ್ಯರಾತ್ರಿ ದಾಟಿದ ಬಳಿಕ ಖಂಡಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ 1.44ಕ್ಕೆ ಚಂದ್ರಗ್ರಹಣ ಗೋಚರಿಸಲಿದೆ. 12.57ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, 1.30ಕ್ಕೆ ಮಧ್ಯಕಾಲವಾಗಿ 2.27ಕ್ಕೆ ಗ್ರಹಣ ಮೋಕ್ಷವಾಗಲಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಶಾಸ್ತ್ರ ಪ್ರಕಾರ ಇಂದು ಸಂಜೆ 4 ಗಂಟೆಯಿಂದಲೇ ಭೋಜನ ನಿಷಿದ್ಧವಾಗಿದ್ದು, ನಾಳೆ ಸೂರ್ಯೋದಯದ ನಂತರ ಆಹಾರ ಸೇವಿಸಬೇಕು.
ಉಡುಪಿಯವರಿಗೆ ರಾತ್ರಿ 1 ಗಂಟೆ 5 ನಿಮಿಷಕ್ಕೆ ಪ್ರಾರಂಭವಾಗಿ 2 ಗಂಟೆ 22 ನಿಮಿಷಕ್ಕೆ ಗ್ರಹಣ ಕಾಲ ಮುಗಿಯುತ್ತದೆ. ಇದನ್ನು ಬರಿ ಕಣ್ಣಿನಲ್ಲಿ ವೀಕ್ಷಿಸಬಹುದು. ಮಂಗಳೂರುನಲ್ಲಿ ಅ.28 ಮತ್ತು 29ರ ನಡುರಾತ್ರಿಯಲ್ಲಿ ಸುಮಾರು 1.05 ಗಂಟೆಯಿಂದ 2.20ರವರೆಗೆ ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದ್ದು, ರಾಜ್ಯದೆಲ್ಲೆಡೆ ಗೋಚರಿಸಲಿದೆ. ಆಸಕ್ತರಿಗೆ ಇದನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಂಜೆ 7.30ರಿಂದ ಅವಕಾಶ ಕಲ್ಪಿಸಲಾಗಿದೆ.
ಗ್ರಹಣ ನಿಮಿತ್ತ ದೇವಸ್ಥಾನಗಳಲ್ಲಿ ಪೂಜಾ ಸಮಯ ಮತ್ತು ಅನ್ನದಾನದಲ್ಲಿ ವ್ಯತ್ಯಾಸವಾಗಲಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಅ.28ರಂದು ದೈನಂದಿನ ಪೂಜಾ ಸಮಯದಲ್ಲಿ ಮತ್ತು ಭಕ್ತರ ದರ್ಶನದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ರಾತ್ರಿ ಭಕ್ತರಿಗೆ ಭೋಜನ ಪ್ರಸಾದ ಇರುವುದಿಲ್ಲ. ಸ್ವಾಮೀಜಿಯವರು ಉಪವಾಸ ವ್ರತ ಆಚರಿಸಲಿದ್ದಾರೆ.





























































































































error: Content is protected !!
Scroll to Top