ಕೆಲವೇ ಸೆಕುಂಡು ಇರುವಾಗ ಪರೀಕ್ಷಾರ್ಥ ಉಡ್ಡಯನ ಕೈಬಿಟ್ಟ ಇಸ್ರೊ
ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ಕೊನೇ ಕ್ಷಣದಲ್ಲಿ ಸ್ಥಗಿತವಾಗಿದೆ. ಲಾಂಚ್ ಕಮಾಂಡ್ ನೀಡುತ್ತಿದ್ದ ಕಂಪ್ಯೂಟರ್ ಗಗನಯಾನವನ್ನು ನಿಲ್ಲಿಸಲು ಸೂಚನೆ ನೀಡಿದ ಪ್ರಕಾರ ಕೆಲವೇ ಸೆಕುಂಡುಗಳು ಬಾಕಿಯಿರುವಾಗ ಗಗನಯಾನವನ್ನು ಕೈಬಿಡಲಾಗಿದೆ. ಕಂಪ್ಯೂಟರ್‌ಗೆ ಗಗನಯಾನ ಸದ್ಯಕ್ಕೆ ಸ್ಥಗಿತಗೊಳಿಸಲು ಸೂಚನೆ ಬಂದಿದೆ. ನಾವು ದೋಷವನ್ನು ಪರಿಶೀಲಿಸಲಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.ಿಂದು ಬೆಳಗ್ಗೆ ಪರೀಕ್ಷಾರ್ಥ ಉಡ್ಡಯನಕ್ಕೆ ಸಕಲ ತಯಾರಿಗಳನ್ನು ನಡೆಸಲಾಗಿತ್ತು. ಇಸ್ರೊದ ಮುಂದಿನ ಗಗನಯಾನ ಮಿಷನ್‌ಗಳಿಗೆ ಈ ಪರೀಕ್ಷೆ ದಿಕ್ಸೂಚಿಯಾಗಿತ್ತು.








