ಮಾಜಿ ಕ್ರಿಕೆಟಿಗ ಅಜರುದ್ದೀನ್‌ ವಿರುದ್ಧ ಭ್ರಷ್ಟಾಚಾರ ಕೇಸ್‌ ದಾಖಲು

ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಹಣ ದುರುಪಯೋಗ ಆರೋಪ

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ವಿರುದ್ಧ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ)ಯ ಹಣ ದುರುಪಯೋಗಪಡಿಸಿದ ದೂರು ದಾಖಲಾಗಿದೆ.
ಸಂಸ್ಥೆಯ ನಿಧಿ ದುರುಪಯೋಗದ ಆರೋಪದ ಮೇಲೆ ಅಜರುದ್ದೀನ್ ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ)ನ ಕೆಲವು ಮಾಜಿ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಬೋಸ್ ಅವರ ದೂರಿನ ಆಧಾರದ ಮೇಲೆ ಎಚ್‌ಸಿಎ ಮಾಜಿ ಅಧ್ಯಕ್ಷ ಅಜರುದ್ದೀನ್ ಮತ್ತು ಇತರ ಮಾಜಿ ಪದಾಧಿಕಾರಿಗಳ ವಿರುದ್ಧ ಹೈದರಾಬಾದಿನ ಉಪ್ಪಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜರುದ್ದೀನ್ ತನ್ನ ವಿರುದ್ಧದ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಪಿತೂರಿ ಎಂದು ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಅನೇಕ ವಿವಾದಗಲ್ಲಿ ಈ ಹಿಂದೆಯೂ ಸಿಲುಕಿದ್ದರು. 23 ವರ್ಷದ ಹಿಂದೆ ಅವರು ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಒಳಗಾಗಿದ್ದರು. ನಂತರ ಅವರನ್ನು ಕ್ರಿಕೆಟಿನಿಂದ ನಿಷೇಧಿಸಲಾಗಿತ್ತು. ನಿಷೇಧಿಸಲಾಗಿತ್ತು.















error: Content is protected !!
Scroll to Top