ಅಫಿಡವಿತ್‌ನಲ್ಲಿದೆ ಸಂಸದೆಯ ಲಾಲಸೆಯ ಪೂರ್ಣ ವಿವರ
ಹೊಸದಿಲ್ಲಿ : ಉದ್ಯಮಿ ಗೌತಮ್ ಅದಾನಿ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹೀರಾನಂದಾನಿ ರಿಯಲ್‌ಎಸ್ಟೇಟ್ ಕಂಪನಿಯ ದರ್ಶನ್ ಹೀರಾನಂದಾನಿಯಿಂದ ಹಣ ಮತ್ತು ಉಡುಗೊರೆಗಳನ್ನು ಪಡೆದ ಆರೋಪಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರ ವಿರುದ್ಧ ಇನ್ನಷ್ಟು ಆರೋಪಗಳು ಕೇಳಿಬಂದಿವೆ. ಈ ಕುರಿತು ತನಿಖೆ ನಡೆಸುತ್ತಿರುವ ಸಂಸತ್ತಿನ ನೈತಿಕ ಸಮಿತಿಗೆ ಸ್ವತಹ ದರ್ಶನ್ ಹೀರಾನಂದನಿ ಸಲ್ಲಿಸರುವ ಅಫಿಡವಿತ್‌ನಲ್ಲಿ ಆರೋಪ ನಿಜ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಕ್ಷಿಪ್ರವಾಗಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಬೇಕೆಂಬ ಹಂಬಲ ಮಹುವಾ ಮೊಯಿತ್ರಾಗಿತ್ತು. ಆಗ ಆಕೆಗೆ ಕೆಲವರು ಪ್ರಧಾನಮಂತ್ರಿ ಮೋದಿಯನ್ನು ಟೀಕಿಸಿದರೆ ಬೇಗ ಪ್ರಸಿದ್ಧ ಬರುತ್ತದೆ ಎಂದು ಸಲಹೆ ನೀಡಿದ್ದರು ಎಂದು ಈ ಅಫಿಡವಿತ್‌ನಲ್ಲಿ ತಿಳಿಸಲಾಗಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸ್ಪೀಕರ್‌ಗೆ ಪತ್ರ ಬರೆಯುವುದರೊಂದಿಗೆ ಪ್ರಶ್ನೆ ಕೇಳಲು ಹಣ ಸ್ವೀಕರಿಸಿದ ಹಗರಣ ಬಯಲಿದೆ ಬಂದಿದೆ. ಇದು 2005ರ ಪ್ರಶ್ನೆಗಾಗಿ ನೋಟು ಹಗರಣದ ಪುನರಾವರ್ತನೆ ಎನ್ನಲಾಗುತ್ತಿದೆ.
ಮಹುವಾ ಮೊಯಿತ್ರ ಸಂಸದೆಯಾದ ಬಳಿಕ ಸಂಸತ್ತಿನಲ್ಲಿ ಕೇಳಿದ 60 ಪ್ರಶ್ನೆಗಳ ಪೈಕಿ 51 ಪ್ರಶ್ನೆಗಳು ಅದಾನಿ ಸಮೂಹಕ್ಕೆ ಸಂಬಂಧಿಸಿತ್ತು ಮತ್ತು ಅವರು ಉದ್ದೇಶಪೂರ್ವಕವಾಗಿ ಮೋದಿಯನ್ನು ಟೀಕಿಸಿದ್ದರು. ಮಹುವಾ ಮೊಯಿತ್ರ ತನ್ನ ಪಾರ್ಲಿಮೆಂಟ್ ಲಾಗಿನ್ ಐಡಿಯನ್ನೇ ದರ್ಶನ್ ಹೀರಾನಂದಾನಿಗೆ ನೀಡಿದ್ದರು. ಹೀರಾನಣದಾನಿ ಕಂಪನಿ ಇದರಲ್ಲಿ ನೇರವಾಗಿ ಪ್ರಶ್ನೆಗಳನ್ನು ಹಾಕುತ್ತಿತ್ತು. ಈ ಪ್ರಶ್ನೆಗಳನ್ನೆ ಮಹುವಾ ಮೊಯಿತ್ರ ಸಂಸತ್ತಿನಲ್ಲಿ ಕೇಳುತ್ತಿದ್ದರು ಎಂಬ ಆಘಾತಕಾರಿ ಅಂಶ ಅಫಿಡವಿತ್‌ನಲ್ಲಿದೆ.
ಈ ಎಲ್ಲ ಆರೋಪಗಳನ್ನು ನಿರಾಕರಿರುವ ಮಹುವಾ ಮೊಯಿತ್ರ ಇದು ತನ್ನ ಬಾಯಿ ಮುಚ್ಚಿಸುವ ತಂತ್ರ ಎಂದು ಹೇಳಿದ್ದಾರೆ. ದರ್ಶನ್ ಹೀರಾನಂದಾನಿಯಿಂದ ಬಲವಂತವಾಗಿ ಅಫಿಡವಿತ್ ಪಡೆದುಕೊಳ್ಳಲಾಗಿದೆ. ಅವರಿಗೆ ಅಫಿಡವಿತ್ ಕಳುಹಿಸಿ 20 ನಿಮಿಷದಲ್ಲಿ ಸಹಿ ಮಾಡಿಕೊಡಬೇಕೆಂದು ಬೆದರಿಕೆ ಒಡ್ಡಲಾಗಿತ್ತು ಎಂದು ಹೇಳಿದ್ದಾರೆ.














































































