ಹೊಸ ಮೊಬೈಲ್ ಕೊಡಿಸುವಂತೆ ಹಠ ಹಿಡಿದ ಯುವಕ – ಬ್ಲ್ಯಾಕ್‌ಮೇಲ್‌ ಮಾಡಲು ಹೋಗಿ ದುರಂತ ಅಂತ್ಯ

ಚಿತ್ರದುರ್ಗ : ಮೊಬೈಲ್ ಕೊಡಿಸುವಂತೆ ಅಜ್ಜನಿಗೆ ಬ್ಲ್ಯಾಕ್​ ಮಾಡಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಮ್ಮಗ ಮೃತಪಟ್ಟಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್​ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಯಶವಂತ್​(20) ಮೃತ ಯುವಕ. ಹೊಸ ಮೊಬೈಲ್ ಕೊಡಿಸುವಂತೆ ಹಠ ಹಿಡಿದಿದ್ದ ಯಶವಂತ್, ಬೆದರಿಸಲೆಂದು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ದುರದೃಷ್ಟವಶಾತ್ ಯಶವಂತ್ ದುರಂತ ಅಂತ್ಯಕಂಡಿದ್ದಾನೆ.

ಅ. 8ರಂದು ಮಹಾಗಣಪತಿ ವಿಸರ್ಜನೆ ವೇಳೆ ಯಶವಂತ್​ ಮೊಬೈಲ್ ಕಳೆದುಕೊಂಡಿದ್ದ. ಆದ್ದರಿಂದ ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಹಠ ಹಿಡಿದಿದ್ದ. ಆದರೆ ಅಜ್ಜ ಈರುಳ್ಳಿ ಬೆಳೆ ಬಂದ ಬಳಿಕ ಮೊಬೈಲ್ ಕೊಡಿಸುವುದಾಗಿ ಹೇಳಿದ್ದರು. ಆದರೆ ಯುವಕ ಈಗಲೇ ಮೊಬೈಲ್‌ ಬೇಕು ಎಂದು ಬ್ಲ್ಯಾಕ್‌​ ಮೇಲ್ ಮಾಡಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಯಶವಂತ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































































































error: Content is protected !!
Scroll to Top