ಫೋಟೋ ತೆಗೆಯಲು ತೆರಳಿದ ವೇಳೆ ಮೊಬೈಲ್‌ ಕಿತ್ತು ತೊಂದರೆ – ಕಾರ್ಕಳ ನಗರ ಠಾಣೆಗೆ ದೂರು

ಕಾರ್ಕಳ : ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ತೆರಳಿದ ಸಮಯದಲ್ಲಿ ಯುವಕರ ತಂಡವೊಂದು ತೊಂದರೆ ನೀಡಿದೆ ಎಂದು ಅಲ್ಬಜ್‌ ಎಂಬಾತ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ. 19ರಂದು ತಾನು ಫೋಟೋ ತೆಗೆಯಲು ತೆರಳಿದ ಸಂದರ್ಭ ಅಲ್ಲಿಯೇ ಇದ್ದ ವಿಖ್ಯಾತ್, ಸುಹಾಸ್, ರಾಕೇಶ್, ರಂಜಿತ್, ಮುಸ್ತಾಫ ಮೊದಲಾದವರು ಅವಾಚ್ಯ ಶಬ್ದಗಳಿಂದ ಬೈದು ತನ್ನನ್ನು ಎಳೆದುಕೊಂಡು ಹೋಗಿ ಮೊಬೈಲ್‌ ಕಿತ್ತುಕೊಂಡಿದ್ದಾರೆ ಎಂದು ಅಲ್ಬಜ್‌ ದೂರಿನಲ್ಲಿ ತಿಳಿಸಿದ್ದಾರೆ.

ನಲ್ಲೂರು – ವ್ಯಕ್ತಿ ಆತ್ಮಹತ್ಯೆ

ಕಾರ್ಕಳ : ನಲ್ಲೂರು ಗ್ರಾಮದ ಗಾಂಧಿನಗರ ನಿವಾಸಿ ಸುರೇಂದ್ರ ಶೆಟ್ಟಿ (38) ಅ. 19ರಂದು ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಮುಂಬಯಿಯ ಬೀಡಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರು ತಿಂಗಳ ಹಿಂದೆ ಸುರೇಂದ್ರ ಶೆಟ್ಟಿ ಅವರ ತಾಯಿ ಮಳೆ ನೀರಿಗೆ ತೋಡಿನಲ್ಲಿ ಕೊಚ್ಚಿಕೊಂಡು ಹೋಗಿ ಅಸುನೀಗಿದ್ದರು. ಆ ಬಳಿಕ ಸುರೇಂದ್ರ ಶೆಟ್ಟಿ ಅವರು ಮಾನಸಿಕವಾಗಿ ನೊಂದುಕೊಂಡಿದ್ದರು. ಒಂದು ಕಡೆ ಸರಿಯಾದ ಕೆಲಸವೂ ಇಲ್ಲದೇ ಕುಗ್ಗಿದ್ದರು. ಗುರುವಾರ ನಲ್ಲೂರು ಗ್ರಾಮದ ನಡಾಯಿಪಲ್ಕೆ ಹಾಡಿಯಲ್ಲಿನ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































































































error: Content is protected !!
Scroll to Top