ವಿಶ್ವಕಪ್‌ ಟೂರ್ನಿ : ಇಂದು ಹೈವೋಲ್ಟೇಜ್‌ ಪಂದ್ಯದಲ್ಲಿ ಮನೋರಂಜನೆ ಬೋನಸ್‌

ಬಾಲಿವುಡ್‌ ತಾರೆಯರಿಂದ ಪಂದ್ಯ ಆರಂಭಕ್ಕೆ ಮೊದಲು ಕಾರ್ಯಕ್ರಮ

ಅಹಮದಾಬಾದ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣ ಇಂದು ನಡೆಯಲಿದೆ. ಇದರ ಜತೆಗೆ ಈ ಪಂದ್ಯ ವೀಕ್ಷಣೆಗೆ ಟಿಕೆಟ್‌ ಪಡೆದವರಿಗೆ ಬಾಲಿವುಡ್ ತಾರೆಯರನ್ನು ಒಳಗೊಂಡ ಸಂಗೀತ ಸಮಾರಂಭವೂ ಬೋನಸ್‌ ಆಗಿ ಸಿಗಲಿದೆ. ಈ ಸಾಲಿನ ವಿಶ್ವಕಪ್‌ ಟೂರ್ನಿಯ ಉದ್ಘಾಟನೆ ಬಹಳ ಸರಳವಾಗಿತ್ತು. ಇದಕ್ಕೆ ಕಾರಣ ಏನೆಂದು ಬಿಸಿಸಿಐ ಇನ್ನೂ ಸ್ಪಷ್ಟಪಡಿಸಿಲ್ಲ. ಒಂದು ದಿನ ಮೊದಲು ಎಲ್ಲ ತಂಡಗಳ ಉಪಸ್ಥಿತಿಯಲ್ಲಿ, ಗಾನ-ಬಜಾನಾ, ಡ್ಯಾನ್ಸ್‌ ಇತ್ಯಾದಿ ಕಾರ್ಯಕ್ರಮಗಳ ಮೂಲಕ ವಿಶ್ವಕಪ್‌ ಟೂರ್ನಿ ಅದ್ದೂರಿಯಾಗಿ ಆರಂಭ ಆಗುವುದು ಇಷ್ಟರ ತನಕದ ವಾಡಿಕೆಯಾಗಿತ್ತು. ಆದರೆ ಈ ಸಲ ಈ ಸಂಪ್ರದಾಯವನ್ನು ಬಿಸಿಸಿಐ ಕೈಬಿಟ್ಟಿದೆ. ಹೀಗಾಗಿ ಭಾರತಪ-ಪಾಕಿಸ್ಥಾನ ಪಂದ್ಯ ನಡೆಯುವ ಇಂದು ವಿಶೇಷ ಕಾರ್ಯಕ್ರಮ ಇಟ್ಟಿದೆ. ಇದು ವ್ಯಾಪಕ ಟೀಕೆಗೂ ಕಾರಣವಾಗಿದೆ.

ಐಸಿಸಿ ವಿಶ್ವಕಪ್ 2023 ಆರಂಭದ ವೇಳೆ ಯಾವುದೇ ಸಮಾರಂಭವಿಲ್ಲದ ಕಾರಣ ಇಂದು ಬಾಲಿವುಡ್ ಗಾಯಕರಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮೂಲಕ ಅದನ್ನು ಸರಿದೂಗಿಸಲಾಗುತ್ತಿದೆ. ಪಂದ್ಯಾವಳಿಯ ಗೋಲ್ಡನ್ ಟಿಕೆಟ್ ಹೊಂದಿರುವವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನ 12.40ಕ್ಕೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.
ಪಂದ್ಯಾವಳಿಯ ಅಧಿಕೃತ ಗೀತೆಯಲ್ಲಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಅವರಂತಹ ಬಾಲಿವುಡ್ ತಾರೆಗಳು ಪ್ರದರ್ಶನ ನೀಡಲಿದ್ದಾರೆ. ಅವರ ಜತೆಗೆ ನಟಿ ತಮನ್ನಾ ಭಾಟಿಯಾ ಮತ್ತು ಗಾಯಕ ಅರಿಜಿತ್ ಸಿಂಗ್ ಕಿಕ್ಕೇರಿಸಲಿದ್ದಾರೆ. ಭಾರತ ಮತ್ತು ಪಾಕಿಸ್ಥಾನ ಎರಡೂ ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವುದರಿಂದ ಈ ಪಂದ್ಯ ಪಾಯಿಂಟ್‌ ಪಟ್ಟಿಗೆ ನಿರ್ಣಾಯಕವಾಗಿದೆ. ಮೂರು ಪಂದ್ಯಗಳ ನಂತರ ಪಾಯಿಂಟ್ ಪಟ್ಟಿಯಲ್ಲಿ ಯಾರು ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸಲು ಈ ಪಂದ್ಯ ಸಾಕಷ್ಟು ಪೈಪೋಟಿಗೆ ಕಾರಣವಾಗಲಿದೆ. ಪಂದ್ಯ ವೀಕ್ಷಣೆಗಾಗಿ ದೇಶ- ವಿದೇಶಗಳಿಂದ ಅಭಿಮಾನಿಗಳು ಈಗಾಗಲೇ ಸ್ಟೇಡಿಯಂನತ್ತ ಹೆಜ್ಜೆ ಹಾಕುತ್ತಿದ್ದಾರೆ.



















































































error: Content is protected !!
Scroll to Top