ಕಾರ್ಕಳ : ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಅ. 15ರಿಂದ 23 ರವರೆಗೆ ವಿಶೇಷ ಪೂಜೆ, ಚಂಡಿಕಾಹೋಮ, ಕಲ್ಪೋಕ್ತ ಪೂಜೆ, ರಂಗಪೂಜೆ, ದುರ್ಗಾನಮಸ್ಕಾರ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಉತ್ಸವ ಹಾಗೂ ನಿತ್ಯ ಅನ್ನಪ್ರಸಾದ ಸೇವೆ ನಡೆಯಲಿದೆ. ವೇ.ಮೂ. ಬ್ರಹ್ಮಶ್ರೀ ಜಾರ್ಕಳ ಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.
ಅ. 15 ರಂದು ಬೆಳಿಗ್ಗೆ 6.45 ಸಂಜೆ 7.30 ರವರೆಗೆ ಭಜನಾಮೃತಂ – ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.50 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯಾಗಲಿದೆ. ರಾತ್ರಿ 8 ಗಂಟೆಯಿಂದ ತೆಳ್ಳಾರು ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ʼಚಿಣ್ಣರ ಚಿಲಿಪಿಲಿʼ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.
ಅ. 16 ರಂದು ಬೆಳಿಗ್ಗೆ 11.15 ರಿಂದ ಆನೆಕೆರೆ ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ರಾತ್ರಿ 7.50 ರಿಂದ ಕುಂದಾಪುರ ಹಾಲಾಡಿ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ಕುಶ – ಲವ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಅ. 17 ರಂದು ಬೆಳಿಗ್ಗೆ ಕಾರ್ಕಳ ಶ್ರೀ ವೀರಭದ್ರ ಗುರುಮಾಚಿದೇವ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ರಾತ್ರಿ 7:30 ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ, 8 ಗಂಟೆಯಿಂದ ಸ್ಥಳೀಯ ಯುವತಿಯರಿಂದ ನವಶಕ್ತಿ ವೈಭವ ನೃತ್ಯ ರೂಪಕ ಜರುಗಲಿದೆ.
ಅ. 18 ರಂದು ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ರಾತ್ರಿ 7.50 ರಿಂದ ನಮ್ಮೂರ ಕಲಾವಿದರು ತೆಳ್ಳಾರು ತಂಡದವರಿಂದ ತುಳು ಹಾಸ್ಯಮಯ ಸಾಮಾಜಿಕ ನಾಟಕ ಬದುಕೊಂಜಿ ಅಲೆಗಾದ್ ನಾಟಕ ಪ್ರದರ್ಶನಗೊಳ್ಳಲಿದೆ.
ಅ. 19 ರಂದು ಬೆಳಗ್ಗೆ 9 ಗಂಟೆಗೆ ಚಂಡಿಕಾ ಹೋಮ ಪ್ರಾರಂಭವಾಗಲಿದೆ. 12 ಗಂಟೆಗೆ ಚಂಡಿಕಾ ಹೋಮದ ಪೂರ್ಣಾಹುತಿಯಾಗಲಿದೆ. ರಾತ್ರಿ 7.50 ರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಅ. 20 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಕಳ ಶ್ರೀ ಪದ್ಮಾವತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ರಾತ್ರಿ 7.50 ಕ್ಕೆ ಬಜ್ಪೆ ಥಂಡರ್ ಗೈಸ್ ಫೌಂಡೇಶನ್ ಪ್ರಸ್ತುತ ಪಡಿಸುವ ಕ್ಷೇತ್ರ ಪುರಾಣ ನೃತ್ಯ ರೂಪಕ ಜರುಗಲಿದೆ.
ಅ. 21 ರಂದು ಬೆಳಗ್ಗೆ 11 ಗಂಟೆಗೆ ಕಾರ್ಕಳ ಬಂಟ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ರಾತ್ರಿ 7.50 ರಿಂದ ಉಡುಪಿ ಅಭಿನಯ ಕಲಾವಿದರಿಂದ ತುಳು ಸಾಮಾಜಿಕ ನಾಟಕ ಶಾಂಭವಿ ಪ್ರದರ್ಶನಗೊಳ್ಳಲಿದೆ.
ಅ. 22 ರಂದು ಬೆಳಗ್ಗೆ 6.45 ರಿಂದ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ – ಭಜನೋತ್ಸವ ನಡೆಯಲಿದೆ. ಸಂಜೆ 6:30 ರಿಂದ ತುಳು ಯಕ್ಷಗಾನ ಹಾಸ್ಯ ಪ್ರಸಂಗ ಸ್ವರ್ಗದ ಫಲ ಪ್ರದರ್ಶನಗೊಳ್ಳಲಿದೆ. ರಾತ್ರಿ 7.50 ರಿಂದ ಮುದ್ರಾಡಿ ಧರ್ಮಯೋಗಿ ಪ್ರೊಡಕ್ಷನ್ ಪ್ರಸ್ತುತ ಪಡಿಸುವ ಚಾರಿತ್ರಿಕ ತುಳು ನಾಟಕ ಸರ್ಪ ಸಂಪಿಗೆ ಪ್ರದರ್ಶನಗೊಳ್ಳಲಿದೆ.
ಅ. 23 ರಂದು ಬೆಳಗ್ಗೆ 11 ಗಂಟೆಗೆ ಅನಂತಶಯನ ಶ್ರೀಲಕ್ಷ್ಮೀ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ರಾತ್ರಿ 8.30 ರಿಂದ ಮೋಕೆದ ಕಲಾವಿದೆರ್ ಮುಂಡ್ಲಿ ಕಲಾವಿದರಿಂದ ತುಳು ಹಾಸ್ಯಮಯ ಸಾಮಾಜಿಕ ನಾಟಕ ಈ ದಾಯೆ ಪಾತೆರುಜಾ ಪ್ರದರ್ಶನಗೊಳ್ಳಲಿದೆ.



















