ರಾಜ್ಯಕ್ಕೆ ಕತ್ತಲೆ ಗ್ಯಾರಂಟಿ ಕರುಣಿಸಿದ ಸಿದ್ದರಾಮಯ್ಯ ಸರಕಾರ : ಬಿಜೆಪಿ ಟೀಕೆ

ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಕುರಿತು ಬಿಜೆಪಿ ಟ್ವೀಟ್‌ ಮಾಡಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ. ಎಲ್ಲಿ ನೋಡಿದರೂ ಪವರ್ ಕಟ್ ಎಂದು ಕಿಡಿಕಾರಿದೆ. ನ್ಯಾಯಾಲಯದಲ್ಲೂ ಪವರ್ ಕಟ್, ವಿಧಾನಸೌಧದಲ್ಲೂ ಪವರ್ ಕಟ್, ಹಾಗೂ ಶಾಸಕರ ಸಭೆಯಲ್ಲೂ ಪವರ್ ಕಟ್ ಎಂದು ಹೇಳಿದೆ.

ಅಲ್ಲದೇ ರೈತರ ಪಂಪ್‌ಸೆಟ್‌ಗಳಿಗೂ ಪವರ್ ಕಟ್, ಸ್ಕೂಲ್, ಕಾಲೇಜುಗಳಲ್ಲೂ ಪವರ್ ಕಟ್. ಕಂಪನಿ, ಕೈಗಾರಿಕೆಗಳಲ್ಲೂ ಪವರ್ ಕಟ್ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಪವರ್ ಕಟ್ ಎಂದು ಬಿಜೆಪಿ ಹೇಳಿದ್ದು, ಸಿದ್ದರಾಮಯ್ಯ ಅವರೇ, ನಿಮ್ಮ ಮನೆಯಲ್ಲಿ ಜನರೇಟರ್ ಇದೆಯೋ ಅಥವಾ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೀರೋ..? ಪ್ರಶ್ನಿಸಿದೆ.

ಟ್ವೀಟ್‌ ಲಿಂಕ್‌ : https://x.com/BJP4Karnataka/status/1712305895785586890?s=20

ರಾಜ್ಯದಲ್ಲಿ ಚುನಾವಣೆಗೂ ಮುನ್ನಕಾಂಗ್ರೆಸ್‌ ಘೋಷಣೆ ಮಾಡದೆ ಉಳಿಸಿಕೊಂಡಿದ್ದ ಗ್ಯಾರಂಟಿಗಳನ್ನು ಇಂದು ಅಧಿಕಾರಕ್ಕೆ ಬಂದು ಜಾರಿಗೆ ತಂದಿದೆ..! ಕನ್ನಡಿಗರ ಕಿವಿ ಮೇಲೆ ಗ್ಯಾರಂಟಿಯ ಹೂವಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಮಜಾ ಮಾಡುತ್ತಾ ತಮಾಷೆ ನೋಡುತ್ತಿದೆ‌ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.







































error: Content is protected !!
Scroll to Top