ಉಡುಪಿ : ನೈಜೀರಿಯಾದ ಅಕ್ರಮ ನುಸುಳು ಕೋರರಿಂದ 2 ಕೆ.ಜಿ. ಕೊಕೇನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಅನಧಿಕೃತವಾಗಿ ಪ್ಲ್ಯಾಟ್ ಬಾಡಿಗೆ ನೀಡಿದ ಆರೋಪದಲ್ಲಿ ಮಣಿಪಾಲದ ಬಾರ್ ಮಾಲಕ ದಿನೇಶ್ ಭಾಸ್ಕರ್ ಶೆಟ್ಟಿಯನ್ನು ಎನ್‌ಸಿಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ದಿನೇಶ್ ಶೆಟ್ಟಿ ಬಂಧಿತ ನೈಜೀರಿಯಾ ವ್ಯಕ್ತಿಗಳಿಂದ ಡ್ರಗ್ಸ್‌ಗಳನ್ನು ಮಣಿಪಾಲದ ತನ್ನ ಬಾರ್‌ಗಳಿಗೆ ತರಿಸಿಕೊಂಡು ಅವ್ಯಾಹತವಾಗಿ ಮಾರಾಟ ಮಾಡಿದ್ದಾಗಿ ಎನ್‌ಸಿಬಿ ತನಿಖೆಯಿಂದ ಹೊರಬಂದಿದೆ. ಸದ್ಯ ಇವರು ಮುಂಬಯಿಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಡ್ರಗ್ಸ್ ಪೆಡ್ಲರ್‌ಗಳ ಬ್ಯಾಂಕ್ ಖಾತೆಯಲ್ಲಿ ಬಾರ್ ಮಾಲಕ ಲಕ್ಷಾಂತರ ರೂ. ವಹಿವಾಟು ನಡೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಮಾದಕ ವಸ್ತು ಕಳ್ಳಸಾಗಣೆದಾರರಿಂದ 4 ನಕಲಿ ಪಾಸ್‌ಪೋರ್ಟ್‌ಗಳು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.






























































