ಮಂಗಳೂರು : ಬಲೆಗೆ ಬಿದ್ದ 300 ಕೆ.ಜಿ ತೂಕದ ಮುರು ಮೀನು

ಮಂಗಳೂರು : ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮುರು ಮೀನು ಸಿಕ್ಕಿದ್ದು ಬಿದ್ದಿದೆ.
ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರದ ಮೀನುಗಾರಿಕೆಗೆಂದು ಹೊರಟ ಬೋಟ್‌ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 300 ಕೆ.ಜಿ ತೂಕವಿರುವ ಈ ಮೀನನ್ನು ಬಲೆಯಿಂದ ಮೇಲಕ್ಕೆತ್ತಲು ಮೀನುಗಾರರು ಹರಸಾಹಸಪಟ್ಟಿದ್ದಾರೆ. ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣ ಸಿಗುವುದು ವಿರಳ. ಕೆ.ಜಿ.ಗೆ 200 ರಂತೆ ಮೀನು ಮಾರಾಟವಾಗಿದೆ ಎಂದು ಮೀನುಗಾಗರರು ತಿಳಿಸಿದ್ದಾರೆ. ಇನ್ನು ಇಷ್ಟು ಬೃಹತ್‌ ಗಾತ್ರದ ಮೀನನ್ನು ಕಂಡು ಗ್ರಾಹಕರು ಸೇರಿದಂತೆ ಮೀನುಗಾರರು ಆಶ್ಚರ್ಯಚಕಿತರಾಗಿದ್ದಾರೆ.



































































































error: Content is protected !!
Scroll to Top