ಕ್ಲಿನಿಕ್ ನಲ್ಲೇ ಕುಸಿದು ಬಿದ್ದು ಸಾವು
ಹೆಬ್ರಿ : ವರಂಗ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರಾಗಿದ್ದ ವರಂಗ ಗ್ರಾಮದ ಮೂಡುಕುಡುರುವಿನ ರವಿ ಪೂಜಾರಿ (55) ಅವರು ಶನಿವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಮುನಿಯಾಲಿನ ಚಟ್ಕಲ್‌ಪಾದೆಯಲ್ಲಿ ದಿನಸಿ ವ್ಯಾಪಾರಸ್ಥರಾಗಿ ಉದ್ಯಮ ನಡೆಸುತ್ತಿದ್ದ ರವಿ ಪೂಜಾರಿ ಅವರು ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದವರು. ಬಿಲ್ಲವ ಸಂಘದಲ್ಲೂ ತೊಡಗಿಸಿಕೊಂಡಿದ್ದರು. ಎರಡು ಅವಧಿಯಿಂದ ವರಂಗ ಸೊಸೈಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಕಳೆದ ತಾ.ಪಂ. ಪಂಚಾಯತ್ ಚುವನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕುಸಿದು ಬಿದ್ದರು
ಶನಿವಾರ ರವಿ ಪೂಜಾರಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ವೈದ್ಯರನ್ನು ಭೇಟಿಯಾಗಲೆಂದು ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಮುನಿಯಾಲಿನ ಕ್ಲಿನಿಕ್‌ಗೆ ಬಂದಿದ್ದರು. ಈ ವೇಳೆ ರವಿ ಪೂಜಾರಿ ಅವರು ಕ್ಲಿನಿಕ್ ನಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.


























