ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಸ್ಮಾರು ವಲಯ, ಉದ್ಯಾವರ ಕುತ್ಪಾಡಿ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹೊಸ್ಮಾರು ಭ್ರಾಮರಿ ಕುಣಿತ ಭಜನಾ ಮಂಡಳಿ, ಈದು ಮೂಕಾಂಬಿಕ ಯುವಕ ಸಂಘ ಪ್ರಗತಿಬಂಧು, ಹೊಸ್ಮಾರು ವಲಯ ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಸಹಕಾರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸೆ. 30 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಣೇಶ್ ಕಾಂಪ್ಲೆಕ್ಸ್ ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಪಾರ್ಶ್ವವಾಯು, ಸಂಧಿವಾತ, ಬೆನ್ನುಹುರಿ ಮತ್ತು ಕುತ್ತಿಗೆಯ ನರದ ತೊಂದರೆ, ಆಮ್ಲ ಪಿತ್ತ ಮತ್ತು ಕರುಳಿನ ಸಂಬಂಧಿ ಖಾಯಿಲೆ, ಚರ್ಮರೋಗ, ಸೋರಿಯಾಸಿಸ್, ಪೈಲ್ಸ್, ಪಿಸ್ತುಲಾ, ಸೈನಸ್, ಸ್ತ್ರೀರೋಗ, ಪ್ರಸೂತಿ ಸಂಬಂಧಿ ಖಾಯಿಲೆಗಳು, ಬಂಜೆತನ, ಗರ್ಭಸಂಸ್ಕಾರ, ಬಾಲ ರೋಗ (ಮಕ್ಕಳ ಚಿಕಿತ್ಸೆ), ಮನೋರೋಗ, ಅಸ್ತಮ ಮತ್ತು ಅಲರ್ಜಿ ಸಂಬಂಧಿ ಖಾಯಿಲೆ, ಶಿರಶೂಲ, ಕಣ್ಣು, ಕಣ್ಣಿನ ಪೊರೆಯ ತೊಂದರೆ, ಕಿವಿ, ಮೂಗು, ಗಂಟಲು ಸಮಸ್ಯೆಗಳು, ಮುಖ-ತ್ವಚೆ ಸೌಂದರ್ಯ, ಸ್ವಾಸ್ಥ್ಯ ರಕ್ಷಣೆ ಬಗ್ಗೆ, ಬೊಜ್ಜುತನ, ಥೈರಾಯಿಡ್ ಖಾಯಿಲೆ, ಮಧುಮೇಹ ತಪಾಸಣೆ, ಪಂಚಕರ್ಮ ಚಿಕಿತ್ಸೆಗಳ ಬಗ್ಗೆ ಮಾಹಿತಿಯೊಂದಿಗೆ ಎಲ್ಲಾ ರೋಗಗಳ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ ಮಾಡಲಾಗುವುದು ಎಂದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.