ಕಾರ್ಕಳ : ಕಾರ್ಕಳ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್‌ನಲ್ಲಿ ಕೋಟಿ-ಚೆನ್ನಯರ 467ನೇ ಜನ್ಮಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ಧಾರ್ಮಿಕ ಪೂಜೆಯನ್ನು ಇರುವತ್ತೂರು ಗರಡಿಮನೆ ಗೋಪಾಲ್ ಪೂಜಾರಿ ನೆರವೇರಿಸಿದರು. ಅಮೃತ ಕಲಶ ಅಭಿಷೇಕ, ಪುಷ್ಪಮಾಲಾ ಅರ್ಚನೆ, ಮಂಗಳಾರತಿ, ಪ್ರಾರ್ಥನೆಯ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಬೈದಶ್ರೀ ಪ್ರತಿಷ್ಠಾನ ಉಡುಪಿಯ ದಾಮೋದರ್ ಕಲ್ಮಾಡಿ, ಯೂತ್ ಬಿಲ್ಲವ ಕಾರ್ಕಳದ ಅಧ್ಯಕ್ಷ ಸುಕೇಶ್ ಪೂಜಾರಿ, ಯುವ ವಾಹಿನಿ ಕಾರ್ಕಳ ಅಧ್ಯಕ್ಷರು ಅರುಣ್ ಮಾಂಜ, ಕೋಟಿ-ಚೆನ್ನಯ ಥೀಮ್ ಪಾರ್ಕಿನ ಸಮಿತಿಯ ಸದಸ್ಯರಾದ ಕರುಣಾಕರ ಕೋಟ್ಯಾನ್ ಭರತ್ ಅಂಚನ್ ಹಾಗೂ ಕೋಟಿ ಚೆನ್ನಯ ಭಕ್ತವೃಂದದ ಭಕ್ತರು ಉಪಸ್ಥಿತರಿದ್ದರು.
ಕೋಟಿ-ಚೆನ್ನಯ ಜನ್ಮಜಯಂತಿ ಆಚರಣೆ
