ಶಿವಪುರದಲ್ಲಿ ಕನ್ನಡ ಡಿಂಡಿಮ ಸರಣಿ ಕಾರ್ಯಕ್ರಮ
ಹೆಬ್ರಿ : ಯಾವುದೇ ಭಾಷೆ ಮಾತನಾಡುವವರಿಂದ ಬೆಳೆಯುತ್ತದೆ. ಕನ್ನಡದ ಪದಗಳನ್ನು ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಬಳಸಬೇಕು.ಆಗ ಕನ್ನಡದ ಕಂಪು ಹರಡುವುದು ಎಂದು ಡಾ.ಪ್ರವೀಣ ಕುಮಾರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಕನ್ನಡ ಡಿಂಡಿಮ ಸರಣಿಯಂಗವಾಗಿ ಶಿವಪುರದ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ನಿಯೋಜಿತ ಉಪನ್ಯಾಸ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ನಿವೃತ್ತ ಅಧ್ಯಾಪಕರಾದ ನಾರಾಯಣ ಅಡಿಗ ಕಾರ್ರಯಕ್ರಮವನ್ನು ಉದ್ಘಾಟಿಸಿ, ಮಕ್ಕಳಲ್ಲಿ ಕನ್ನಡದ ಪ್ರೀತಿಯನ್ನು ಬೆಳೆಸಿದಾಗ ಕನ್ನಡ ಕಂಪು ಹರಡುತ್ತದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯದ ಕಾರ್ಯ ಶ್ಲಾಘನೀಯ ಎಂದರು.
ಕ.ಸಾ.ಪ ಹೆಬ್ರಿ ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೆಬ್ರಿ ಕಸಾಪ ಘಟಕ ಕನ್ನಡ ಡಿಂಡಿಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮತ್ತು ಪುಸ್ತಕ ಪ್ರೀತಿಯನ್ನು ಬೆಳೆಸುತ್ತಿದೆ ಎಂದು ಆಶಯ ನುಡಿಗಳನ್ನಾಡಿದರು. ಶಿವಪುರ ಗ್ರಾ.ಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷ ಶಂಕರ ಬಡ್ಕಿಲ್ಲಾಯ, ಜಿಲ್ಲಾ ಕ.ಸಾ.ಪ ಕೋಶಾಧ್ಯಕ್ಷ ಮನೋಹರ ಪಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಕಳ ತಾಲೂಕು ಅಧ್ಯಕ್ಷ ರಮಾನಂದ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಶರ್ಮಿಳಾ, ಕ.ಸಾ.ಪ ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಕೆ.ಶಿವಪುರ. ಸಾಹಿತ್ಯ ಸಂಘದ ಅಧ್ಯಕ್ಷೆ ವಿದ್ಯಾರ್ಥಿನಿ ಮಾನ್ವಿತಾ ವೇದಿಕೆಯಲ್ಲಿದ್ದರು.
ಕಸಾಪ ಹೆಬ್ರಿ ಘಟಕದ ಪದಾಧಿಕಾರಿ ಶೋಭಾ ಕಲ್ಕೂರ್ ಸ್ವಾಗತಿಸಿ, ಪದಾಧಿಕಾರಿ ವೀಣಾ ಆರ್. ಭಟ್ ವಂದಿಸಿದರು. ಪದಾಧಿಕಾರಿ ಹರೀಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಅಧ್ಯಾಪಕ ಗಣೇಶ ಮರಕಾಲ ಬಹುಮಾನಿತರ ಯಾದಿ ವಾಚಿಸಿದರು. ಕನ್ನಡ ಡಿಂಡಿಮ ಕಾರ್ಯಕ್ರಮದನ್ವಯ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.