ವಂಜಾರಕಟ್ಟೆ ಶಾಲೆಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಕಾರ್ಕಳ : ಬೋಳ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ. 2 ರಂದು ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಪಿ.ವಿ. ರಾವ್, ಜಗದೀಶ್ ಆಚಾರ್, ವಿಜಯ ಆಚಾರ್ ಸಹಕರಿಸಿದರು. ವಂದನ ಹರೀಶ್, ಸಂಗೀತ ಕುಲಾಲ್, ಸಂದೀಪ್ ಬಿ. ಉಪಸ್ಥಿತರಿದ್ದರು. ಸ್ಪಂದನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಂಕಿತ ವಂದಿಸಿದರು.

error: Content is protected !!
Scroll to Top