ಸೆ. 10 : ಕೆಮ್ಮಣ್ಣುವಿನಲ್ಲಿ 35ನೇ ವರ್ಷದ ಮೊಸರು ಕುಡಿಕೆ ಆಚರಣೆ

ಕಾರ್ಕಳ : ಕೆಮ್ಮಣ್ಣು ರೋಟರಿ ಸಮುದಾಯ ದಳ ಮತ್ತು ಶ್ರೀ ದುರ್ಗಾ ಪ್ರೆಂಡ್ಸ್‌ ಕ್ಲಬ್‌ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 35ನೇ ವರ್ಷದ ಮೊಸರು ಕುಡಿಕೆ ಆಚರಣೆ ಕೆಮ್ಮಣ್ಣು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 10 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜರುಗಲಿದೆ.

ಸ್ಪರ್ಧೆಗಳ ವಿವರ :
ಹಗ್ಗ ಜಗ್ಗಾಟ (ಮಹಿಳೆಯರಿಗೆ ಮತ್ತು ಪುರುಷರಿಗಾಗಿ)
ಮಡಕೆ ಒಡೆಯುವುದು (ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ)
ಮೂರು ಕಾಲಿನ ಓಟ (ಮಹಿಳೆಯರಿಗೆ ಮತ್ತು ಪುರುಷರಿಗಾಗಿ)
ಬಾಟಲಿಗೆ ನೀರು ತುಂಬಿಸುವುದು
ಪಾಸಿಂಗ್‌ ಬಾಲ್ (ಮಹಿಳೆಯರಿಗೆ)
ಅದೃಷ್ಟ ಕೋಣೆ (ಸಾರ್ವಜನಿಕರಿಗೆ)
ಕಪ್ಪೆ ಜಿಗಿತ (ಮಕ್ಕಳಿಗೆ)
ಸೀರೆಯ ಬೆಲೆ ನಿಗದಿ (ಎಲ್ಲರಿಗೂ ಮುಕ್ತ ಪ್ರವೇಶ)
ಭಕ್ತಿಗೀತೆ ಸ್ಪರ್ಧೆ (1ರಿಂದ 5ನೇ ತರಗತಿ, 6ರಿಂದ 10ನೇ ತರಗತಿಯ ಮಕ್ಕಳಿಗೆ)
ರಂಗೋಲಿ ಸ್ಪರ್ಧೆ (ಮಹಿಳೆಯರಿಗೆ)
ಮುದ್ದುಕೃಷ್ಣ ಸ್ಪರ್ಧೆ – ಸಂಜೆ 4.00ಕ್ಕೆ (5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ -ವೇಷಭೂಷಣ ಮತ್ತು ನಟನೆಯನ್ನು ಪರಿಗಣಿಸಲಾಗುವುದು)
ಭಾರ ಎತ್ತುವ ಸ್ಪರ್ಧೆ
ಲಿಂಬೆ ಚಮಚ ಓಟ (ಮಹಿಳೆಯರಿಗೆ) ಹಾಗೂ ಇತರೆ ಹಲವು ಆಕರ್ಷಕ ಸ್ಪರ್ಧೆಗಳು ಏರ್ಪಡಿಸಲಾಗುತ್ತದೆ.

ಸನ್ಮಾನ – ಪ್ರತಿಭಾ ಪುರಸ್ಕಾರ
ಸಂಜೆ 5:30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೇ. ಮೂ. ಪ್ರಸನ್ನ ಆಚಾರ್ಯ ಎಂ. ಎ. ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರೋಟರಿಯ ನಿಕಟ ಪೂರ್ವ ಅಸಿಸ್ಟೆಂಟ್‌ ಗವರ್ನರ್ ಶಶಿಕಾಂತ ಕರಿಂಕ, ನಿವೃತ್ತ ಶಿಕ್ಷಕ ವಿಷ್ಣುಮೂರ್ತಿ ರಾವ್‌ ಮತ್ತು ಕೃಷಿಕ ವಾಸು ಆಚಾರ್ಯ ಅವರಿಗೆ ಸನ್ಮಾನ ಮತ್ತು ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ಕೆಮ್ಮಣ್ಣು ಪರಿಸರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.









































































































































































error: Content is protected !!
Scroll to Top