ಕಾರ್ಕಳ : ಬೈಪಾಸ್ ರಸ್ತೆಯ ಅತ್ತೂರು ಕ್ರಾಸ್ ಬಳಿ ಈಚರ್ ವಾಹನವೊಂದು ಪಲ್ಟಿಯಾದ ಘಟನೆ ಸೆ. 9 ರಂದು ಸಂಭವಿಸಿದೆ. ವರಂಗದಿಂದ ಮಂಗಳೂರಿಗೆ ಸಾಗುತ್ತಿದ್ದ ಈಚರ್ ಅತ್ತೂರು ಚರ್ಚ್ ದ್ವಾರದ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅತ್ತೂರು ಕ್ರಾಸ್‌ನಲ್ಲಿ ಈಚರ್ ಪಲ್ಟಿ – ಚಾಲಕ ಪಾರು
