ಕಾರ್ಕಳ : ಯುವಶಕ್ತಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಕಾಳಿಕಾಂಬ, ಕರಿಯಕಲ್ಲು ಕಾರ್ಕಳ ಇಲ್ಲಿ ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಯುವಶಕ್ತಿ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಯುವಶಕ್ತಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮುದ್ದುಕೃಷ್ಣ ಮತ್ತು ರಾಧಾಕೃಷ್ಣ ಸ್ಪರ್ಧೆ ಶನಿವಾರ ನಡೆಯಿತು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮಂಗಳೂರು ಎಂಸಿಎಫ್‌ನ ಉನ್ನತಾಧಿಕಾರಿ ಕೆ.ಬಿ. ಕೀರ್ತನ್ ಕುಮಾರ್, ಸುರೇಶ್ ಕೆ. ಪಲ್ಲವಿ ಡೆಕೋರೇಟರ್ಸ್ ಕಾಳಿಕಾಂಬ ಕಾರ್ಕಳ, ಕಾಳಿಕಾಂಬ ದೇವಸ್ಥಾನ ಮ್ಯಾನೇಜರ್ ದಿನೇಶ್, ಶಾಲಾ ಸಂಚಾಲಕ ಅಬ್ದುಲ್ ಕಾಲಿಕ್, ಪೋಷಕ ಸಮಿತಿ ಅಧ್ಯಕ್ಷೆ ಹರಿಣಿ , ಉದಯ್ ಹೆಗ್ಡೆ, ಸಂತೋಷ್ ರಾವ್, ಪ್ರಕಾಶ್ ರಾವ್, ನಳಿನಾಕ್ಷಿ ಹೆಗ್ಡೆ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶ್ರುತಿ ಕೆ. ಶಿಂಧೆ, ಶರಣ್ಯ ಆಚಾರ್ಯ, ಶಾರದಾ ಸಹಕರಿಸಿದರು. ಸುರಕ್ಷಾ ರಾವ್ ಸ್ವಾಗತಿಸಿ, ನಿವೇದ ವಂದಿಸಿದರು ಶ್ರುತಿ ಕೆ. ಶಿಂಧೆ ಕಾರ್ಯಕ್ರಮ ನಿರೂಪಿಸಿದರು.
ಯುವಶಕ್ತಿ ಶಾಲೆ ಮುದ್ದುಕೃಷ್ಣ, ರಾಧಾಕೃಷ್ಣ ಸ್ಪರ್ಧೆ
