ಚೆನ್ನೈ: ಚಂದ್ರಯಾನ ಯಶಸ್ಸು ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದ ಖುಷಿಯಲ್ಲಿರುವಾಗಲೇ ಈ ವೈಜ್ಞಾನಿಕ ಸಾಹಸಕ್ಕಾಗಿ ಶ್ರಮಿಸಿದ್ದ ವಿಜ್ಞಾನಿಯೊಬ್ಬರು ಹೃದಯಾಘಾತವಾಗಿ ನಿಧನರಾದ ದುಃಖದ ಸುದ್ದಿ ಬಂದಿದೆ. ಚಂದ್ರಯಾನ 3 ಉಡಾವಣೆಯ ಕೌಂಟ್‌ಡೌನ್ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲಮರ್ತಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.
ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. ಇಸ್ರೊ ರಾಕೆಟ್ ಉಡಾವಣೆಯ ಸಮಯದಲ್ಲಿ ಕೌಂಟ್‌ಡೌನ್ ಎಂಬುದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದು ಇಡೀ ರಾಷ್ಟ್ರವನ್ನು ಒಟ್ಟುಗೂಡಿಸುವ ಒಂದು ಅಪ್ರತಿಮ ಘಟನೆಯಾಗಿದೆ. ಚಂದ್ರಯಾನ 3ರ ವೇಳೆ ಕೇಳಿದ್ದ ಕೌಂಟ್‌ಡೌನ್ ಧ್ವನಿಯಾಗಿದ್ದ ವಿಜ್ಞಾನಿ ವಲಮರ್ತಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು, ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು.
ಚಂದ್ರಯಾನದ ಕೌಂಟ್‌ಡೌನ್ ಧ್ವನಿಯಾಗಿದ್ದ ವಿಜ್ಞಾನಿ ವಲಮರ್ತಿ ನಿಧನ
