ಆದಿತ್ಯ-L1 ಉಪಗ್ರಹ ಉಡಾವಣೆಗೆ ಕೌಂಟ್‌ಡೌನ್‌

ಇಂದು ಸೂರ್ಯನತ್ತ ಇಸ್ರೊ ಬಾಹ್ಯಾಕಾಶ ನೌಕೆ

ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹುಮ್ಮಸ್ಸಿನಲ್ಲಿರುವ ಇಸ್ರೊ ಇದೀಗ ಸೂರ್ಯನ ಅಧ್ಯಯನಕ್ಕೆ ಇಂದು ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ರವಾನಿಸಲಿದ್ದು, ಇದರ ಕೌಂಟ್‌ಡೌನ್‌ ಶುರುವಾಗಿದೆ. ಈ ಯೋಜನೆಯೂ ಯಶಸ್ವಿಯಾಗುವಂತೆ ಕೋರಿ ದೇಶದಾದ್ಯಂತ ಹೋಮ-ಹವನ, ವಿಶೇಷಪೂಜೆ ಹಾಗೂ ಪ್ರಾರ್ಥನೆಗಳು ನಡೆಯುತ್ತಿವೆ.
ಇಂದು ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದ ಲಾಂಚ್ ಪ್ಯಾಡ್‌ನಿಂದ ಉಪಗ್ರಹ ಉಡಾವಣೆಯಾಗಲಿದೆ. ಉಡಾವಣೆಯ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ತಪಾಸಣೆ ಎಲ್ಲವೂ ಪೂರ್ಣಗೊಂಡು ಇಸ್ರೊ ವಿಜ್ಞಾನಿಗಳು ಕ್ಷಣಗಣನೆಯಲ್ಲಿದ್ದಾರೆ.
ಆದಿತ್ಯ-L1 ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯವಾಗಿದ್ದು, ಈ ಉಪಗ್ರಹವನ್ನು ಇಸ್ರೋದ PSLV-C57 ಉಡಾವಣಾ ವಾಹಕದ ಮೂಲಕ ಸೂರ್ಯನತ್ತ ರವಾನಿಸಲಾಗುತ್ತಿದೆ. ಈ ಆದಿತ್ಯಾ ಎಲ್‌1 ಉಪಗ್ರಹ ಸೂರ್ಯನ ವಿವರವಾದ ಅಧ್ಯಯನವನ್ನು ಹೊಂದಲು ಏಳು ವಿಭಿನ್ನ ಪೇಲೋಡ್‌ಗಳನ್ನು ಒಯ್ಯುತ್ತದೆ. ಅದರಲ್ಲಿ ನಾಲ್ಕು ಸೂರ್ಯನ ಬೆಳಕನ್ನು ವೀಕ್ಷಿಸುತ್ತದೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿ ಟು ನಿಯತಾಂಕಗಳನ್ನು ಅಳೆಯುತ್ತದೆ.
ಪ್ರತಿ ದಿನ 1,440 ಫೋಟೋ
ಆದಿತ್ಯ L1 ಉಪಗ್ರಹದಲ್ಲಿ ಇರುವ ಒಂದು ಪೇಲೋಡ್ ಪ್ರತಿ ದಿನ 24 ಗಂಟೆಗಳ ಅವಧಿಯಲ್ಲಿ 1,440 ಫೋಟೋ ಕ್ಲಿಕ್ಕಿಸಲಿದೆ. ಉಳಿದ 6 ಪೇಲೋಡ್‌ಗಳು ಬೇರೆ ಬೇರೆ ರೀತಿಯ ವೈಜ್ಞಾನಿಕ ಸಂಶೋಧನೆ ನಡೆಸಲಿವೆ.ಆದಿತ್ಯ-L1 ಅನ್ನು ಲಗ್ರಾಂಜಿಯನ್ ಪಾಯಿಂಟ್ 1 (ಅಥವಾ L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತಿದೆ. ಇದು ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರದಲ್ಲಿದೆ. ಈ ದೂರವನ್ನು ಕ್ರಮಿಸಲು ಆದಿತ್ಯಾ ಎಲ್ 1 ಉಪಗ್ರಹಕ್ಕೆ ಸುಮಾರು ನಾಲ್ಕು ತಿಂಗಳ ಅವಧಿ ಬೇಕು.error: Content is protected !!
Scroll to Top