ಪುಣೆ ಎಫ್‌ಟಿಐಐ ಅಧ್ಯಕ್ಷರಾಗಿ ನಟ ಮಾಧವನ್‌ ನೇಮಕ

ರಾಷ್ಟ್ರ ಪ್ರಶಸ್ತಿ ವಿಜೇತ ನಟನಿಗೆ ಉನ್ನತ ಸ್ಥಾನ ನೀಡಿದ ಕೇಂದ್ರ ಸರಕಾರ

ಪುಣೆ: ಸಿನೆಮಾ ಕಲಾವಿದರು ಮತ್ತು ತಂತ್ರಜ್ಞರನ್ನು ತರಬೇತುಗೊಳಿಸುವ ಪುಣೆಯ ಪ್ರತಿಷ್ಠಿತ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಅಧ್ಯಕ್ಷರಾಗಿ ನಟ-ನಿರ್ಮಾಪಕ ಆರ್. ಮಾಧವನ್ ಅವರನ್ನು ಸರಕಾರ ನೇಮಿಸಿದೆ. ಶುಕ್ರವಾರ ಮಾಧವನ್‌ ಹೆಸರನ್ನು ಎಫ್‌ಟಿಐಐಗೆ ನಾಮನಿರ್ದೇಶನಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದು, ಮಾಧವನ್‌ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಎಫ್‌ಟಿಐಐ ಅಧ್ಯಕ್ಷರಾಗಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ಮಾಧವನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಮತ್ತು ಬಲವಾದ ನೈತಿಕತೆ ಈ ಸಂಸ್ಥೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಪಾಸಿಟಿವ್ ಬದಲಾವಣೆಗಳನ್ನು ತರುತ್ತದೆ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಖಾತ್ರಿಯಿದೆ. ನಿಮಗೆ ನನ್ನ ಶುಭಾಶಯಗಳು ಎಂದು ಅನುರಾಗ್‌ ಠಾಕೂರ್‌ ಟ್ವೀಟ್ ಮಾಡಿದ್ದಾರೆ.
ಅನುರಾಗ್ ಠಾಕೂಜೀ ಅವರಿಗೆ ತುಂಬ ಧನ್ಯವಾದಗಳು. ಎಲ್ಲ ನಿರೀಕ್ಷೆಗಳನ್ನು ಪೂರೈಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಟ್ವೀಟ್‌ನಲ್ಲೇ ಮಾಧವನ್‌ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

error: Content is protected !!
Scroll to Top