ಬಾಗಲಕೋಟೆ: ಕಾಲೇಜು ಆವರಣದಲ್ಲೇ ಪ್ರಾಂಶುಪಾಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಸಮೀಪದ ಹುನಗುಂದ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ನಾಗರಾಜ್ ಮುದಗಲ್ (50) ಆತ್ಮಹತ್ಯೆ ಮಾಡಿಕೊಂಡ ಪ್ರಾಂಶುಪಾಲ.
ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಾನಪದ ಸಂಸ್ಕೃತಿ ಕಾರ್ಯಕ್ರಮದ ಸಿದ್ಧತೆಗಳನ್ನು ಪ್ರಾಂಶುಪಾಲರು ನೋಡಿಕೊಳ್ಳುತ್ತಿದ್ದರು. ತಡರಾತ್ರಿಯವರೆಗೂ ಸಿದ್ಧತೆಗಳ ಮೇಲ್ವಿಚಾರಣೆ ಮಾಡಿದ ನಂತರ ಮನೆಗೆ ತೆರಳಿ ಬೆಳಿಗ್ಗೆ ರೆಡಿಯಾಗಿ ಕಾಲೇಜಿಗೆ ಬಂದಿದ್ದರು.ಕಾಲೇಜಿಗೆ ಬಂದಿದ್ದ ನಂತರ ಮುದಗಲ್ ಮೃತದೇಹ ಮೆಟ್ಟಿಲಿನ ಗ್ರಿಲ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾಲೇಜಿನಲ್ಲೇ ಪ್ರಾಂಶುಪಾಲ ಆತ್ಮಹತ್ಯೆ






























































