ಬಾಹ್ಯಾಕಾಶದಲ್ಲಿ ಭಾರತದ ಹೊಸ ವಿಕ್ರಮಕ್ಕೆ ಇನ್ನು ಕೆಲವೇ ತಾಸು ಬಾಕಿ

ಇಡೀ ಜಗತ್ತಿನ ಗಮನ ಚಂದ್ರಯಾನ-3ರತ್ತ; ಎಲ್ಲೆಡೆ ನಡೆಯುತ್ತಿದೆ ಯಶಸ್ವಿಗಾಗಿ ಪ್ರಾರ್ಥನೆ

ಹೊಸದಿಲ್ಲಿ : ಚಂದ್ರಯಾನ-3 ನಿಗದಿತ ಯೋಜನೆಯಂತೆ ಇಂದು ಸಂಜೆಯೇ ಚಂದ್ರನ ಮೇಲೆ ಇಳಿಯಲಿದೆ ಎಂದು ಇಸ್ರೊ ಸ್ಪಷ್ಟಪಡಿಸಿದೆ. ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸುವ ದಿನಾಂಕವನ್ನು ಆ.27ಕ್ಕೆ ಮುಂದೂಡಲಾಗಿದೆ ಎಂದು ಸುದ್ದಿಗಳನ್ನು ಅಲ್ಲಗಳೆದಿರುವ ಇಸ್ರೊ ಎಲ್ಲವೂ ಯೋಜನೆಯಂತೆ ನಡೆಯುತ್ತಿದೆ. ಇಷ್ಟರ ತನಕ ಯವುದೆ ಅಡಚಣೆ ಎದುರಾಗಿಲ್ಲ. ಚಂದ್ರನ ಅತಿ ಸಮೀಪದ ಕಕ್ಷೆ ತಲುಪಿರುವ ಲ್ಯಾಂಡರ್‌ ಬುಧವಾರ ಸಂಜೆ 6.04ಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ ಎಂದು ಹೇಳಿದೆ. ಲ್ಯಾಂಡರ್‌ ಇಳಿಯುವ ಚಂದ್ರನ ದಕ್ಷಿಣ ಧ್ರುವ ಮೈನಸ್‌ 180 ಡಿಗ್ರಿ ಉಷ್ಣತೆ ಇರುವ ಪ್ರದೇಶ. ಈ ಕಡು ಚಳಿಯ ಪ್ರದೇಶದಲ್ಲಿ ಗಗನನೌಕೆ ಸಂಶೋಧನಾ ಕಾರ್ಯ ನಡೆಸಲಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಶಶಿಯ ಸ್ಪರ್ಶಕ್ಕೆ ರೆಡಿಯಾಗಿದೆ. ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ಲ್ಯಾಂಡರ್ ಲ್ಯಾಂಡ್ ಆಗಲು ಸಮಯ ನಿಗದಿ ಮಾಡಲಾಗಿದೆ. ಸಂಜೆ 5.45ಕ್ಕೆ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭವಾಗಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಸೂರ್ಯ ರಶ್ಮಿ ಬಿದ್ದ ಬಳಿಕವಷ್ಟೇ ಲ್ಯಾಂಡಿಂಗ್ ಸಾಧ್ಯವಾಗಲಿದೆ. ಬರೋಬ್ಬರಿ 45 ದಿನಗಳ ಪ್ರಯಾಣದ ಮೂಲಕ ವಿಕ್ರಮ್​ ಲ್ಯಾಂಡರ್ 3.84 ಲಕ್ಷ ಕಿಲೋ ಮೀಟರ್​ ಪ್ರಯಾಣಿಸಿ ಚಂದ್ರನ ಸಮೀಪಕ್ಕೆ ತಲುಪಿದೆ. ಇನ್ನು ಚಂದ್ರನ ಕಕ್ಷೆಗೆ ಸೇರಿದ ಬಳಿಕ ನೌಕೆ ಐದು ಬಾರಿ ಪ್ರದಕ್ಷಿಣೆ ಹಾಕಿದೆ. ಇದೀಗ ಲ್ಯಾಂಡರ್‌ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತಿದ್ದು, ಲ್ಯಾಂಡರ್​ನಿಂದ ಪ್ರಗ್ಯಾನ್​ ರೋವರ್ ಹೊರಬರುವ ಕ್ಷಣಗಣನೆ ಶುರುವಾಗಿದೆ.
ಚಂದ್ರನ ಮೇಲ್ಮೈನಲ್ಲಿ ಹೆಪ್ಪುಗಟ್ಟಿದ ಪ್ರದೇಶದಲ್ಲಿ ಲ್ಯಾಂಡರ್​ ಇಳಿಸೋದು ಭಾರಿ ಸವಾಲಿನ ಕೆಲಸವಾಗಿದೆ. ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಆದ ಬಳಿಕ ಅದರಿಂದ ಪ್ರಗ್ಯಾನ್ ರೋವರ್ ಹೊರಬರಲಿದೆ. ಚಂದ್ರನ ಮೇಲಿನ ಉಷ್ಣಾಂಶ, ಭೂಕಂಪನ, ಅಲ್ಲಿರುವ ಪ್ಲಾಸ್ಮಾ ಪ್ರಮಾಣವನ್ನು ಅಳತೆ ಮಾಡಿ ಎಲ್ಲಾ ಮಾಹಿತಿಯನ್ನು ಭೂಮಿಗೆ ಕಳುಹಿಸಲಿದೆ.
ಚಂದ್ರನ ಮೇಲೆ ಲ್ಯಾಂಡರ್ ಲ್ಯಾಂಡ್ ಆದ ಬಳಿಕ ಪ್ರಕ್ರಿಯೆ ಶುರವಾಗಲಿದೆ. ಚಂದ್ರನ ಮೇಲೆ 6 ಚಕ್ರ ಹೊಂದಿರುವ ರೋವರ್ ಓಡಾಟ ನಡೆಸಿ ಸಂಶೋಧನೆ ಆರಂಭವಾಗಲಿದೆ. ರೋವರ್‌ಗೆ ಸೂರ್ಯನ ಬೆಳಕೇ ಶಕ್ತಿಯಾಗಿದ್ದು, ಸೋಲಾರ್ ಪ್ಯಾನಲ್ ಮೂಲಕ ಈ ರೋವರ್ ಓಡಾಟ ನಡೆಸುತ್ತದೆ. ಚಂದ್ರನ ಮೇಲೆ 14 ದಿನ ರೋವರ್ ಸಂಶೋಧನೆ ನಡೆಸಲಿದೆ.





























































































































error: Content is protected !!
Scroll to Top