ಕಾರು ಬೈಕು ಮುಖಾಮುಖಿ ಡಿಕ್ಕಿ – ಸವಾರನಿಗೆ ಗಾಯ
ಕಾರ್ಕಳ : ನೀರೆ ಬೈಲೂರಿನಲ್ಲಿ ಆ. 22 ರ ರಾತ್ರಿ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಉಡುಪಿ ಆಭರಣ ಮೋಟರ್ಸ್‌ನಲ್ಲಿ ಸರ್ವೀಸ್ ಮಾಡಿದ ಕಾರನ್ನು ಕಾರ್ಕಳ ಆಭರಣ ಮೋಟರ್ಸ್ ಗೆ ಚಲಾಯಿಸಿಕೊಂಡು ಬರುವಾಗ ಬೈಲೂರಿನಿಂದ ಗುಡ್ಡೆಯಂಗಡಿ ಕಡೆಗೆ ಸಾಗುತ್ತಿದ್ದ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್ ಸವಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.









































