ಮಿಯ್ಯಾರು : ಕಥೋಲಿಕ್ ಸಭಾ ಘಟಕದಲ್ಲಿ ಪ್ರತಿಭಾ ಪುರಸ್ಕಾರ

ಕಾರ್ಕಳ : ಮಿಯ್ಯಾರು ಕಥೊಲಿಕ್ ಸಭಾ ಘಟಕದಲ್ಲಿ ಆ. 13 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಬಲಿಪೂಜೆ ಜರುಗಿತು. 2022-23 ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85ಕ್ಕೂ ಅಧಿಕ ಅಂಕ ಪಡೆದ ಚರ್ಚ್‌ ವ್ಯಾಪ್ತಿಯಲ್ಲಿನ 14 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಚರ್ಚ್‌ನ ಧರ್ಮಗುರು ಪೌವ್ಲ್ ರೇಗೊ ಅವರು ಮಾತನಾಡಿ, ಶೈಕ್ಷಣಿಕ ಸಾಧನೆ ಜೀವನದ ಯಶಸ್ಸಿಗೆ ದಾರಿಯಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಘಟಕದ ಅಧ್ಯಕ್ಷ ಜೋನ್ ಮಸ್ಕರೇನ್ಹಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಾ| ಡೊಮಿನಿಕ್ ವೇಗಸ್, ಸಂಚಾಲಕಿ ರೀನಾ ಡಿ’ಸೋಜ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಐಡಾ ಪಿರೇರಾ, ಕಥೊಲಿಕ್ ಸಭಾ ಘಟಕದ ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.















































































error: Content is protected !!
Scroll to Top