ಪೇಟೆ ಧಾರಣೆ : ಟೊಮ್ಯಾಟೋ ಬೆಲೆ ಇಳಿಕೆ – ಹಣ್ಣಿನ ದರದಲ್ಲಿ ಏರಿಳಿತ

ಕಾರ್ಕಳ : ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಟೊಮ್ಯಾಟೋ ಬೆಲೆ ನಿಧಾನಗತಿಯಲ್ಲಿ ಇಳಿಕೆ ಕಂಡಿದೆ. ಸುಮಾರು 150 ರವರೆಗೆ ಇದ್ದ ಬೆಲೆ ಈಗ 60 ರೂ. ಗೆ ಇಳಿಕೆ ಕಂಡಿದೆ. ಇನ್ನು ಹಣ್ಣಿನ ದರದಲ್ಲಿ ಏರಿಳಿತವಾಗಿದೆ. ದೇಶಿಯ ಹಣ್ಣುಗಳ ಇಳುವರಿ ಪ್ರಾರಂಭವಾಗಿದೆ. ಇನ್ನು ಹಬ್ಬಗಳು ಆರಂಭವಾಗುತ್ತಿದ್ದಂತೆ ಹಣ್ಣಿನ ಬೇಡಿಕೆ ಹೆಚ್ಚಾಗಲಿದೆ. ಕೋಳಿ ಮಾಂಸದಲಿ ಟೈಸನ್‌ ಮಾಂಸದ ಬೆಲೆ ತುಸು ಏರಿಕೆಯಾಗಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50, ಮುಳ್ಳುಸೌತೆ : 50-60 ರೂ., ಶುಂಠಿ : 180 ರೂ., ಹಸಿ ಶುಂಠಿ – 120 ರೂ., ಟೊಮ್ಯಾಟೋ : 60-70 ರೂ. , ಚೀನಿಕಾಯಿ : 25 ರೂ., ನೀರುಳ್ಳಿ : 30-35 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 180-200 ರೂ., ಸೌತೆ : 30 ರೂ., ಬೀನ್ಸ್‌ : 60 ರೂ., ಕಾಯಿಮೆಣಸು : 60 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ. ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 40-50 ರೂ., ತೊಂಡೆಕಾಯಿ : 70 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಹೀರೆ ಕಾಯಿ : 70 ರೂ., ಘಾಟಿ ಹೀರೆ : 40 ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು :  140-200 ರೂ. (ದೇಶೀಯ), 260 ರೂ. (ವಿದೇಶಿ),  ದಾಳಿಂಬೆ : 140- 160 ರೂ., ಮಾವು : 60 -120 ರೂ., ದ್ರಾಕ್ಷಿ : 120 – 140 ರೂ., ಕಲ್ಲಂಗಡಿ : 40 ರೂ., ಬಾಳೆ : 60 -100ರೂ., ಕಿತ್ತಳೆ : 100- 140 ರೂ. (ದೇಶಿ), 140 ರೂ. (ವಿದೇಶಿ), ಮೂಸಂಬಿ 60 ರೂ.  ಸೀತಾಫಲ : 120 ರೂ., ರಾಂಬೂಟನ್ – 300 ರೂ., ಡ್ರಾಗ್ಯನ್ ಫ್ರುಟ್ : 200-240 ರೂ. ಬೆಲೆ ಇದೆ ಎಂದು ಕಾರ್ಕಳ ಬಸ್‌ ಸ್ಟ್ಯಾಂಡ್‌ನಲ್ಲಿ ವೆಲ್‌ಕಮ್‌ ಹೋಟೆಲ್‌ ಸಮೀಪವಿರುವ ಫ್ರುಟ್ಸ್‌ ಶಾಪ್‌ನವರು ಹೇಳಿದ್ದಾರೆ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 300 ರೂ., ಬಾಯ್ಲರ್‌ : 190 ರೂ. (ಸ್ಕಿನ್‌ ಔಟ್‌ : 210 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.

















































error: Content is protected !!
Scroll to Top