ಕೆರ್ವಾಶೆ : ಯುವಕ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ. 2 ರಂದು ಕೆರ್ವಾಶೆ ಗ್ರಾಮದ ಪಂಜುರ್ಲಿಗುಡ್ಡೆ ಬಳಿಯ ಕೆಳಗಿನಮನೆಯಲ್ಲಿ ಸಂಭವಿಸಿದೆ. ದೀಕ್ಷಿತ್ (21) ಎಂಬವರೇ ನೇಣಿಗೆ ಶರಣಾದವರು. ಮಧ್ಯಾಹ್ನ 3 ರಿಂದ 4:15 ಗಂಟೆಯ ನಡುವೆ ತಮ್ಮ ಮನೆಯ ಬಳಿ ನಿರ್ಮಾಣ ಹಂತದಲ್ಲಿರುವ ಮನೆಯೊಳಗೆ ಕೋಣೆಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀಕ್ಷಿತ್ ಮದ್ಯವ್ಯಸನಿಯಾಗಿದ್ದು, ಕುಡಿತದ ಚಟದಿಂದಲೇ ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

















































error: Content is protected !!
Scroll to Top