ದೊಂಡೇರಂಗಡಿ : ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಅಜೆಕಾರು : ವ್ಯಕ್ತಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕುಕ್ಕುಜೆ ಗ್ರಾಮದ ದೊಂಡೇರಂಗಡಿಯಲ್ಲಿ ಸಂಭವಿಸಿದೆ. ಕೊರಗಪ್ಪ ಪೂಜಾರಿ (49) ಎಂಬವರೇ ಮೃತ ವ್ಯಕ್ತಿ. ಇವರು ಸಂಸಾರದೊಂದಿಗೆ ಮುಂಬಯಿಯಲ್ಲಿ ವಾಸವಿದ್ದು, ವ್ಯವಹಾರದಲ್ಲಿ ನಷ್ಟ ಹೊಂದಿದ ಕಾರಣ ಜು. 25 ರಂದು ಹೆಂಡತಿಯ ತಂಗಿಯ ಗಂಡನ ಮನೆ ದೊಂಡೇರಂಗಡಿಗೆ ಬಂದಿದ್ದರು. ಜು. 26ರ ರಾತ್ರಿ 12 ಗಂಟೆಯಿಂದ ಜು. 27 ರ ಬೆಳಿಗ್ಗೆ 7:30 ಮಧ್ಯಾವಧಿಯಲ್ಲಿ ಮನೆ ಬಳಿಯ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಕವಿತ ಅವರು ನೀಡಿದ ಮಾಹಿತಿಯಂತೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

















































error: Content is protected !!
Scroll to Top