ತಾಯಿನಾಡ ಋಣ ಎಂದಿಗೂ ಮರೆಯಬಾರದು : ಸುಬೆದಾರ್ ಅನಂತರಾಮ್

ಹೆಬ್ರಿ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್‌ ದಿವಸ್‌ ಆಚರಣೆ

ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ದಿವಸ್ ಆಚರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಕರ್ನಲ್ ಬಿ. ಪ್ರಕಾಶ್‌ಚಂದ್ರ ಇವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಶಾಂತಿ ದೊರಕಲೆಂದು ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶ ಸೇವೆಯ ಬಗ್ಗೆ, ಹಿಂದುಸ್ಥಾನದ ಸೈನಿಕ ಪಡೆಯ ಶ್ರೇಷ್ಠತೆ, ಕಾರ್ಗಿಲ್ ಯುದ್ಧದ ಭೀಕರ ಕ್ಷಣಗಳನ್ನು ವಿವರಿಸಿದರು.
ಸುಬೆದಾರ್ ಅನಂತರಾಮ್ ಮಾತನಾಡಿ ಜನನೀ ಜನ್ಮಭೂಮಿಶ್ಚ ಸ್ವರ್ಗಾನುದಪಿ ಗರಿಯಸಿ ಎಂಬ ಮಾತನ್ನು ಉಲ್ಲೇಖಿಸಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ತಾಯಿ ಮತ್ತು ತಾಯಿನಾಡ ಋಣವನ್ನು ಎಂದಿಗೂ ಮರೆಯಬಾರದು ಎಂದರು.
ಸಮಾಜ ಸೇವಕ ಈಶ್ವರ್ ಮಲ್ಪೆ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದೆ ತಂದೆ ತಾಯಿ ಹಾಗೂ ಗುರುಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದರು.
ದೇಶಸೇವೆ ಮಾಡಿರುವ ಕರ್ನಲ್ ಬಿ. ಪ್ರಕಾಶ್‌ಚಂದ್ರ, ಸುಬೇದಾರ್ ಅನಂತರಾಮ, ಈಶ್ವರ್ ಮಲ್ಪೆ ಇವರನ್ನು ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್, ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ, ಹಾಸ್ಟೆಲ್ ಕಮಿಟಿಯ ಅಧ್ಯಕ್ಷ ಯೋಗೀಶ್ ಭಟ್, ಹಾಸ್ಟೆಲ್ ಕಮಿಟಿಯ ಸದಸ್ಯ ರಾಮಕೃಷ್ಣ ಆಚಾರ್ಯ, ಸಂಸ್ಥೆಯ ಮೇಲ್ವಿಚಾರಕ ರಾಘವೇಂದ್ರ, ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅದಿತಿ ಹೆಗಡೆ ಮತ್ತು ಶ್ರೀರಕ್ಷಾ ಹೆಗಡೆ ನಿರೂಪಿಸಿ, ಶಿಕ್ಷಕಿ ಅಕ್ಷತಾ ಸ್ವಾಗತಿಸಿದರು.





























































































































error: Content is protected !!
Scroll to Top