ಶೌಚಾಲಯದಲ್ಲಿ ವೀಡಿಯೋ ಶೂಟಿಂಗ್‌ ಪ್ರಕರಣ : ತನಿಖೆ ಚುರುಕು

ಹಿಜಾಬ್‌ ಬಳಿಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಇನ್ನೊಂದು ಪ್ರಕರಣ

ಉಡುಪಿ: ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿರುವ ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಿಸಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬುಭವಾರ ಅಯೋಗದ ಸದಸ್ಯೆ ಖುಬೂ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಹೀಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈಗಾಗಲೇ ಕಾಲೇಜು ಆಡಳಿತ ಮಂಡಳಿಯಿಂದ ಮೂರು ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಮೊಬೈಲ್‌ನಲ್ಲಿ ಏನೂ ಸಿಕ್ಕಿಲ್ಲ. ಪೊಲೀಸರು ಮೊಬೈಲ್​ಗಳನ್ನು ಬೆಂಗಳೂರು ಎಸ್​ಎಸ್​ಎಲ್​ಗೆ ಕಳುಹಿಸಲಿದ್ದಾರೆ. ಮೊಬೈಲ್‌ನಲ್ಲಿ ದಾಖಲಾಗಿರುವ ಎಲ್ಲ ವಿಡಿಯೋ ಚಿತ್ರಗಳನ್ನು ರಿಟ್ರೈವ್ ಮಾಡಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ. ಇಂದು ಆರೋಪಿ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ವಿದ್ಯಾರ್ಥಿನಿಯರ ಚಲನವಲನ ಗಮನಿಸಲು ಕಾಲೇಜಿನ ಸಿಸಿಟಿವಿ ದೃಶ್ಯಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ವಿವರ

ಜು.20ರಂದು ಮಧ್ಯಾಹ್ನ 12.30ಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅಲ್ಲಿಗೆ ತೆರಳಿ ವಿಚಾರಿಸಿದಾಗ ಜು.18ರಂದು ಮಧ್ಯಾಹ್ನ 2.30ರಿಂದ 3 ಗಂಟೆ ಸಮಯದಲ್ಲಿ 2ನೇ ವರ್ಷದ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದಾಗ ಅವಳ ಮೂವರು ಗೆಳೆತಿಯರು ವಿಡಿಯೋ ಮಾಡಲು ಹೋಗಿದ್ದಾರೆ. ಆದ್ರೆ, ಆಕಸ್ಮಿಕವಾಗಿ ಬೇರೊಬ್ಬರ ವಿಡಿಯೋ ಮಾಡಿದ್ದಾರೆ. ಇದು ಆ ವಿದ್ಯಾರ್ಥಿನಿಯ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರ ಸಮಕ್ಷಮದಲ್ಲಿ ವಿಡಿಯೋ ಡಿಲೀಟ್​ ಮಾ ಕ್ಷಮೆಯಾಚಿಸಿದ್ದಾರೆ. ಜು.19ರಂದು ಆಡಳಿತ ಮಂಡಳಿಯವರು ಮೂವರು ವಿದ್ಯಾರ್ಥಿನಿಯರ ಮೊಬೈಲ್​​​​ ವಶಕ್ಕೆ ಪಡೆದುಕೊಂಡಿದ್ದಾರೆ. ಜು.25ರಂದು ಆಡಳಿತ ಮಂಡಳಿಯವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಾವೇ ವಿಡಿಯೋ ಮಾಡಿದ್ದೇವೆ ಎಂದು ಮೂವರು ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ನೀಡಿರುತ್ತಾರೆ. ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿರುತ್ತದೆ ಎಂಬ ಮಾಹಿತಿ ಎಫ್​ಆರ್​ಐನಲ್ಲಿದೆ.
ಪೊಲೀಸರು ಮೂವರು ವಿದ್ಯಾರ್ಥಿನಿಯರ ವಿರುದ್ಧ ಒಂದು ಎಫ್‌ಐಆರ್‌ ಮತ್ತು ಉಡುಪಿಯದ್ದು ಎಂದು ತಿರುಚಿದ ವಿಡಿಯೋ ಒಂದನ್ನು ಪ್ರಸಾರ ಮಾಡಿದ ವೆಬ್‌ಸೈಟ್‌ ವಿರುದ್ಧ ಇನ್ನೊಂದು ಎಫ್‌ಐಆರ್‌ ದಾಖಲಿಸಿದ್ದಾರೆ.





























































































































error: Content is protected !!
Scroll to Top